ಕಾರ್ಕಳ : ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ರಕ್ತದಾನ ಶಿಬಿರ

ಕಾರ್ಕಳ : ಕರ್ನಾಟಕ ರಾಜ್ಯ ಸರಕಾರಿ ಸೌಕರರ ಸಂಘ, ರೋಟರಿ ಕ್ಲಬ್‌ ಕಾರ್ಕಳ, ಬಸ್‌ ಏಜೆಂಟರ ಬಳಗ, ದೈಹಿಕ ಶಿಕ್ಷಣ ಶಿಕ್ಷಕರ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ರಕ್ತನಿಧಿ ಕೇಂದ್ರ ಅಜ್ಜರಕಾಡು ಸಹಯೋಗದೊಂದಿಗೆ ಎ. 18ರಂದು ಕಾರ್ಕಳ ಬಸ್‌ ನಿಲ್ದಾಣದಲ್ಲಿ ರಕ್ತದಾನ ಶಿಬಿರ ನಡೆಯಿತು. ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷೆ ರೇಖಾ ಉಪಾಧ್ಯಾಯ ಶಿಬಿರ ಉದ್ಘಾಟಿಸಿದರು. ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ವೀಣಾ, ರೋಟರಿ ಕಾರ್ಯದರ್ಶಿ ಶಶಿಕಲಾ ಕೆ. ಹೆಗ್ಡೆ, ಬಸ್ ಏಜಂಟರ ಬಳಗದ ಅಧ್ಯಕ್ಷ ಬಾಬು ಮೂಲ್ಯ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜೋಕಿಮ್ ಮೈಕಲ್ ಹೆಚ್. ಪಿಂಟೊ, ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಹೆಗ್ಡೆ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿ, ಹೆಬ್ರಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಹರೀಶ್ ಎಸ್. ಪೂಜಾರಿ ಉಪಸ್ಥಿತರಿದ್ದರು.
ಕೋವಿಡ್ ಬಾಧಿತರಾಗಿ ಮೃತಪಟ್ಟ ಗ್ರೆಟ್ಟಾ ಡಿ’ಸೋಜಾ ಅವರಿಗೆ ಇದೇ ಸಂದರ್ಭದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು. 63ನೇ ಬಾರಿ ರಕ್ತದಾನ ಮಾಡಿರುವ ದೇವದಾಸ್ ಪಾಟ್ಕರ್ ಅವರನ್ನು ಸನ್ಮಾನಿಸಲಾಯಿತು.
ರಾಜಾರಾಮ್ ಶೇರ್ವೆಗಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಇಕ್ಬಾಲ್ ಅಹಮ್ಮದ್ ವಂದಿಸಿದರು.

















































































error: Content is protected !!
Scroll to Top