ಕಾರ್ಕಳ : ಮೈಸೂರಿನ ಜೆ.ಎಸ್.ಎಸ್. ವಿಜ್ಞಾನ ಹಾಗೂ ತಂತ್ರಜ್ಞಾನ ವಿಶ್ವವಿದ್ಯಾಲಯದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ವಿಭಾಗದ ಅಂತಿಮ ಪರೀಕ್ಷೆಯಲ್ಲಿ ಕಾರ್ಕಳದ ಭರತ್ ಎಸ್. ಅವರು ಪ್ರಥಮ ರ್ಯಾಂಕ್ ನೊಂದಿಗೆ ಚಿನ್ನದ ಪದಕ ಪಡೆದಿರುತ್ತಾರೆ. ಈ ಸಾಧನೆಯೊಂದಿಗೆ ಬಿ.ಎಸ್. ಕೇಶವ ಕಿಶನ್ ಮೆಮೋರಿಯಲ್ ಎಂಡೋಮೆಂಟ್ ಮೆಡಲ್ನನ್ನು ಭರತ್ ತಮ್ಮದಾಗಿಸಿಕೊಂಡಿದ್ದಾರೆ. ಇವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಶಂಕರನ್ ಪಿ. ಹಾಗೂ ಸತಿದೇವಿ ಅವರ ಪುತ್ರ.
ಕಾರ್ಕಳದ ಭರತ್ಗೆ ಪ್ರಥಮ ರ್ಯಾಂಕ್








































