ಕಾರ್ಕಳ : ಶ್ರೀ ಭಕ್ತವತ್ಸಲ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಮುರತ್ತಂಗಡಿಯಲ್ಲಿ 9ನೇ ವರ್ಷದ ಮಹಾಪೂಜೆ ಜ. 10ರಂದು ಜರಗಲಿದೆ. ಬೆಳಿಗ್ಗೆ 5 ಗಂಟೆಗೆ ಗಣಹೋಮ, 9 ಗಂಟೆಯಿಂದ ಆಹ್ವಾನಿತ ತಂಡಗಳಿಂದ ಭಜನಾ ಕಾರ್ಯಕ್ರಮ, 12 ಗಂಟೆಗೆ ಮೂಡುಬಿದಿರೆ ಶ್ರೀ ಶಿವಾನಂದ ಗುರುಸ್ವಾಮಿಗಳ ನೇತೃತ್ವದಲ್ಲಿ ಮಹಾಪೂಜೆ, ಅನಂತರ ಇರುಮುಡಿ ಕಟ್ಟುವ ಕಾರ್ಯ ನಡೆಯಲಿದೆ. ಅಪರಾಹ್ನ 1 ಗಂಟೆಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ಭಕ್ತವತ್ಸಲ ಅಯ್ಯಪ್ಪ ಸೇವಾಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.
ಜ. 10 : ಶ್ರೀ ಭಕ್ತವತ್ಸಲ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಮುರತ್ತಂಗಡಿಯಲ್ಲಿ 9ನೇ ವರ್ಷದ ಮಹಾಪೂಜೆ








































