ಮಾಳ : ಟಿಪ್ಪರ್‌-ಕಾರು ಡಿಕ್ಕಿ- 6 ಮಂದಿಗೆ ಗಾಯ

ಕಾರ್ಕಳ : ಮಾಳ ಗ್ರಾಮದ ಎಸ್.ಕೆ. ಬಾರ್ಡರ್‌ ಬಳಿ ಕಾರೊಂದು (KA 02 ಎಂಇ 3748) ಟಿಪ್ಪರ್‌ಗೆ (ಕೆಎಲ್ 60-ಬಿ-5672) ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸೇರಿದಂತೆ 6 ಮಂದಿ ಗಾಯಗೊಂಡ ಘಟನೆ ಜ. 7ರಂದು ಸಂಭವಿಸಿದೆ. ಎಸ್‌.ಕೆ. ಬಾರ್ಡರ್‌ನಿಂದ 2 ಕಿ.ಮೀ. ದೂರದ ತಿರುವಿನಲ್ಲಿ ಟಿಪ್ಪರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಆರ್.ಎ. ಕುಮಾರ್ ಸೇರಿದಂತೆ ಕಾರಿನಲ್ಲಿದ್ದ ಐವರು ಪ್ರಯಾಣಿಕರು ಗಾಯಗೊಂಡಿದ್ದು, ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

















































































error: Content is protected !!
Scroll to Top