ಕಾರ್ಕಳ : ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಭಾಸ್ಕರ್ ಹಾಗೂ ಚಂದನ್ ರಾವ್ ಎಂಬವರು ಕುಕ್ಕುಂದೂರು ಗ್ರಾಮದ ಜಯಂತಿ ನಗರದ ಪ್ರಕಾಶ್ ರಾವ್ ಎಂಬವರಿಗೆ ಹಲ್ಲೆ ನಡೆಸಿರುವ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕಾಶ್ ರಾವ್ ಅವರಿಗೆ ಸೇರಿದ ಬಾವಿಯ ಆವರಣವನ್ನು ಹಾನಿಗೊಳಿಸಲು ಭಾಸ್ಕರ್ ಹಾಗೂ ಚಂದನ್ ರಾವ್ ಪ್ರಯತ್ನಿಸುತ್ತಿದ್ದರು. ಈ ವೇಳೆ ಅವರನ್ನು ಪ್ರಶ್ನಿಸಿದಾಗ ತಗಾದೆ ತೆಗೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿರುತ್ತಾರೆ. ಕೊಲ್ಲುವುದಾಗಿ ಜೀವ ಬೆದರಿಕೆಯೊಡ್ಡಿದ್ದು, ಜಗಳ ಬಿಡಿಸಲು ಬಂದ ಸತೀಶ್ ರಾವ್ ಅವರಿಗೂ ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾರೆ ಎಂದು ನಗರ ಪೊಲೀಸ್ ಠಾಣೆಗೆ ಪ್ರಕಾಶ್ ಅವರು ದೂರು ನೀಡಿರುತ್ತಾರೆ.
ಕುಕ್ಕುಂದೂರು – ಜಾಗದ ವಿಚಾರ : ಜೀವ ಬೆದರಿಕೆ ದೂರು








































