ಕಾರ್ಕಳ : ಕಾರ್ಕಳ ಯುವ ಕಾಂಗ್ರೆಸ್ ನಲ್ಲಿ ಹುದ್ದೆಗಾಗಿ ಕಾರ್ಯಕರ್ತರು ಮಚ್ಚು, ಲಾಂಗ್ ಹಿಡಿದು ಹೊಡೆದಾಟಕ್ಕೆ ಮುಂದಾಗಿದ್ದಾರೆ. ಇಂತವರು ಯಾವ ನೈತಿಕತೆಯಲ್ಲಿ ಜನರ ಬಳಿಗೆ ತೆರಳುತ್ತಾರೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ ಹಾಗೂ ತಾಲೂಕು ಅಧ್ಯಕ್ಷ ಸುಹಾಸ್ ಶೆಟ್ಟಿ ವ್ಯಂಗ್ಯವಾಡಿದ್ದಾರೆ. ಬಜಗೋಳಿಯಲ್ಲಿ ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದ್ದು, ಪ್ರಕರಣ ಪೊಲೀಸ್ ಠಾಣೆಯ ಹಂತಕ್ಕೆರಿತ್ತು. ಅಲ್ಲಿ ರಾಜಿಯಲ್ಲಿ ಪ್ರಕರಣ ಇತ್ಯರ್ಥವಾಗಿದ್ದು, ಇದೀಗ ಪೆಟ್ಟು ತಿಂದ ಯುವಕ ಅನಾಥನಾಗಿದ್ದಾನೆ. ಕಾಂಗ್ರೆಸ್‌ನ ಭಿನ್ನಮತ ಲಾಂಗ್ ಮಚ್ಚಿನ ತನಕ ತಲುಪಿರುವುದು ನಾಚಿಕೆಗೇಡಿನ ಸಂಗತಿ ಎಂದವರು ಹೇಳಿಯಲ್ಲಿ ತಿಳಿಸಿದ್ದಾರೆ.
ಪಕ್ಷದ ಹುದ್ದೆಗಾಗಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ-ನಾಚಿಕೆಗೇಡಿನ ಸಂಗತಿ: ಯುವ ಮೋರ್ಚಾ








































