ಕಾರ್ಕಳ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶನದಂತೆ ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಸಹಯೋಗದೊಂದಿಗೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಇದರ ವತಿಯಿಂದ ಕಾಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ಡ್ರೈರನ್ ಜ. 8ರಂದು ನಡೆಯಿತು. ಸುಮಾರು 25 ಮಂದಿ ಆರೋಗ್ಯ ಕಾರ್ಯಕರ್ತರು ಅಣಕು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು, ನೈಜ ಲಸಿಕೆಯನ್ನು ಹೊರತುಪಡಿಸಿ ಉಳಿದೆಲ್ಲಾ ಲಸಿಕಾ ಪ್ರಕ್ರಿಯೆಯನ್ನು ಈ ಸಂದರ್ಭದಲ್ಲಿ ಮಾಡಲಾಯಿತು. ಲಸಿಕಾ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು, ಲಸಿಕಾ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಶುಶ್ರೂಷಕರು, ತುರ್ತುಚಿಕಿತ್ಸಾ ಔಷಧ, ಆಂಬುಲೆನ್ಸ್, ಕುಡಿಯುವ ನೀರು ಸೌಲಭ್ಯ ಕಲ್ಪಿಸಲಾಗಿತ್ತು.
ಕೋವಿಡ್-19 ವ್ಯಾಕ್ಸಿನ್ ತರಬೇತುದಾರರಾದ ಡಾ. ಹೆಚ್. ಪ್ರಕಾಶ್ ಕುಮಾರ್ ಶೆಟ್ಟಿ, ಡಾ. ಶಮಾ ಶುಕುರ್, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ. ಕೆ.ಎಸ್. ರಾವ್ ಹಾಗೂ ಹಿರಿಯ ಶುಶ್ರೂಷಕಿ ಪದ್ಮಾವತಿ ಉಪಸ್ಥಿತರಿದ್ದರು.
ಕಾರ್ಕಳ ತಾಲೂಕಿನಲ್ಲಿ ಈಗಾಗಲೇ 1686 ಮಂದಿ ಸರಕಾರಿ ಹಾಗೂ ಖಾಸಗಿ ಆರೋಗ್ಯ ಕಾರ್ಯಕರ್ತರು ಕೋವಿನ್ ಆ್ಯಪ್ ನೋಂದಣಿ ಮಾಡಿರುತ್ತಾರೆ. ಲಸಿಕೆ ಸರಬರಾಜು ಆದ ಅನಂತರ ಲಸಿಕೆಯನ್ನು ನೀಡಲು 21 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ.
ಡಾ. ಕೆ. ಕೃಷ್ಣಾನಂದ ಶೆಟ್ಟಿ








































