ಕಾರ್ಕಳ ಸರಕಾರಿ ಆಸ್ಪತ್ರೆಯ ಸಿಬ್ಬಂದಿಯೋರ್ವರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಅಡ್ಡಿ : ಆರೋಪ

ಕಾರ್ಕಳ : ತಾಲೂಕು ಆಸ್ಪತ್ರೆಯ ಹಿರಿಯ ಆರೋಗ್ಯ ಸಹಾಯಕಿಯೊಬ್ಬರು ತಾವು ವಾಸವಿದ್ದ ಸರಕಾರಿ ವಸತಿ ನಿಲಯದ ಮುಂಭಾಗದಲ್ಲಿದ್ದ ತುಳಸಿ ಕಟ್ಟೆಯನ್ನು ಧ್ವಂಸಗೊಳಿಸಿ ಹಿಂದೂಗಳ ಧಾರ್ಮಿಕ ಭಾವನೆ ಧಕ್ಕೆಯನ್ನುಂಟು ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸರಕಾರಿ ಆಸ್ಪತ್ರೆಯ ಹಿರಿಯ ಆರೋಗ್ಯ ಸಹಾಯಕಿ ಎಲಿಯಮ್ಮ ಎಂಬವರು ಇತ್ತೀಚೆಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ವರ್ಗಾವಣೆಯಾಗಿ ತಮ್ಮ ಕುಟುಂದೊಂದಿಗೆ ಆಸ್ಪತ್ರೆಯ ಪಕ್ಕದಲ್ಲಿರುವ ವಸತಿ ನಿಲಯದಲ್ಲಿ ವಾಸವಾಗಿರುತ್ತಾರೆ. ಇತ್ತೀಚೆಗೆ ಎಲಿಯಮ್ಮ ಅವರು ವಸತಿ ನಿಲಯದ ಅಂಗಳದಲ್ಲಿದ್ದ ತುಳಸಿ ಕಟ್ಟೆಯನ್ನು ಕೆಡವಿ ಹಾಕಿರುವುದಾಗಿ ಬಜರಂಗದಳ ಹಾಗೂ ಗುಡ್ಡೆಯಂಗಡಿ ಫ್ರೆಂಡ್ಸ್‌ ಕಾರ್ಯಕರ್ತರು ಆರೋಪಿಸಿದ್ದಾರೆ.

ಸ್ಪಷ್ಟನೆ
ತಮ್ಮ ಕಾರು ನಿಲ್ಲಿಸಲು ಸ್ಥಳವಿರಲಿಲ್ಲ ಹಾಗಾಗಿ ತುಳಸಿಕಟ್ಟೆಯನ್ನು ತೆಗೆದು ಬದಿಗೆ ಇರಿಸಿದ್ದು ನಿಜ ಇದರಲ್ಲಿ ಬೇರೆನೂ ಉದ್ದೇಶವಿರಲಿಲ್ಲ ಎಂದು ಈ ಘಟನೆಗೆ ಎಲಿಯಮ್ಮ ಹಾಗೂ ಅವರ ಪತಿ ಸ್ಪಷ್ಟನೆ ನೀಡಲು ಮುಂದಾದಾಗ ನೀವು ಸಮೀಪದಲ್ಲಿದ್ದ ಮತ್ತೊಂದು ತುಳಸಿಕಟ್ಟೆಯನ್ನು ಕೂಡ ಧ್ವಂಸ ಮಾಡಿರುತ್ತೀರಿ. ಇಂತಹ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಜರಂದ ದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿರುತ್ತಾರೆ ಎಂದು ತಿಳಿದುಬಂದಿದೆ.

ಕಾರ್ಕಳ ಸರಕಾರಿ ಆಸ್ಪತ್ರೆಯ ವಸತಿ ನಿಲಯದಲ್ಲಿ ವಾಸವಾಗಿರುವ ಕ್ರಿಶ್ವಿಯನ್‌ ಕುಟುಂಬವೊಂದು ತುಳಸಿ ಕಟ್ಟೆ ಧ್ವಂಸ ಮಾಡಿರುತ್ತಾರೆ. ಇದು ಕೂಡ ಒಂದು ಬಗೆಯ ಮತಾಂತರದ ಸಂಚು ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಸುನಿಲ್‌ ಕೆ.ಆರ್.‌ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

















































































error: Content is protected !!
Scroll to Top