ಮುಡಾರು : ಕಾರು ಡಿಕ್ಕಿ -ಪಾದಚಾರಿಗೆ ಗಾಯ

ಕಾರ್ಕಳ : ಮುಡಾರು ಗ್ರಾಮದ ಪ್ರಭು ಕ್ಯಾಂಟೀನ್‌ ಬಳಿ ಕಾರೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಪರಿಣಾಮ ಪಾದಚಾರಿ ಗಾಯಗೊಂಡು ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಾಗಿದ್ದಾರೆ. ಗುರುವಾಯನಕೆರೆಯಿಂದ ಕಾರ್ಕಳ ಕಡೆ ಬರುತ್ತಿದ್ದ ಕಾರು (KA 20 B 9232) ಮುಡಾರು ಪ್ರಭು ಕ್ಯಾಂಟೀನ್‌ ಬಳಿ ನಿಂತಿದ್ದ ಮುಸ್ತಾಫ್ ಎಂಬವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮುಸ್ತಾಫ್ ಡಾಮರು ರಸ್ತೆಗೆ ಬಿದ್ದು ಗಾಯಗೊಂಡಿರುತ್ತಾರೆ. ಗಾಯಾಳು ಅವರನ್ನು ತಕ್ಷಣವೇ ಕಾರ್ಕಳ ಸಿಟಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎ.ಜೆ. ಆಸ್ಪತ್ರೆಗೆ ರವಾನಿಸಲಾಯಿತು.

















































































error: Content is protected !!
Scroll to Top