ನವದೆಹಲಿ: ಜನವರಿ 8 ರಂದು ಪೂರ್ವ ಲಡಾಖ್‌ನ ಪಾಂಗೊಂಗ್ ಸರೋವರದ ದಕ್ಷಿಣ ಭಾಗದಲ್ಲಿ ಚೀನಾದ ಸೈನಿಕನನ್ನು ಭಾರತೀಯ ಸೈನಿಕರು ಬಂಧಿಸಿದ್ದಾರೆ ಎಂದು ಶನಿವಾರ ಅಧಿಕೃತ ಮೂಲಗಳು ತಿಳಿಸಿವೆ.
ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್ಎಸಿ)ಯ ಭಾರತದ ಭಾಗಕ್ಕೆ ಅತಿಕ್ರಮಣ ಮಾಡಿದ್ದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಸೈನಿಕನನ್ನು ಆ ಪ್ರದೇಶದಲ್ಲಿ ನಿಯೋಜಿಸಲಾಗಿದ್ದ ಭಾರತೀಯ ಸೈನಿಕರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ಚೀನಾ ನಡುವೆ ಸುಮಾರು ಎಂಟು ತಿಂಗಳ ಕಾಲ ನಡೆದ ಗಡಿ ಸಂಘರ್ಷದ ಬೆನ್ನಲ್ಲೇ ಚೀನಾ ಸೈನಿಕನನ್ನು ಸೆರೆ ಹಿಡಿಯಲಾಗಿದೆ.

ಎಲ್‌ಎಸಿ ದಾಟಿ ಬಂದ ಚೀನಾ ಸೈನಿಕನ ವಿರುದ್ಧ ಕಾರ್ಯವಿಧಾನಗಳು ಮತ್ತು ಸನ್ನಿವೇಶಗಳ ಪ್ರಕಾರ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಭಾರತದೊಂದಿಗಿನ ಸುದೀರ್ಘ ಲಡಾಖ್ ಸಂಘರ್ಷದಲ್ಲಿ ನಿರತವಾಗಿರುವ ಚೀನಾ, ಗಡಿಯಿಂದ ಇನ್ನೂ ಕಾಲ್ಕಿಳಲು ಸಿದ್ಧವಿಲ್ಲ. ಲಡಾಖ್‌ನ ಪೂರ್ವ ಗಡಿಯಲ್ಲಿ ಇನ್ನೂ ಚೀನಿ ಸೈನಿಕರು ಭಾರೀ ಸಂಖ್ಯೆಯಲ್ಲಿ ಬೀಡು ಬಿಟ್ಟಿದ್ದಾರೆ ಎಂಬುದು ಈಗ ಮತ್ತೊಮ್ಮೆ ಸಾಭೀತಾಗಿದೆ.








































