ಪುರಸಭೆಯಿಂದ ಅಸಮರ್ಪಕ ಕಸ ವಿಲೇವಾರಿ- ವಾರ ಕಳೆದರೂ ಕಸ ಸಂಗ್ರಹಕ್ಕೆ ಬರುತ್ತಿಲ್ಲ ವಾಹನ

ಕಾರ್ಕಳ, ನ. 30 : ಕಾರ್ಕಳ ಪುರಸಭೆಯ ಕಸ ವಿಲೇವಾರಿ ಸಮಸ್ಯೆ ಮುಂದುವರಿದಿದೆ. ಕೆಲವು ವಾರ್ಡುಗಳಿಗೆ ಕಸ ಸಂಗ್ರಹ ವಾಹನ ವಾರವಾದರೂ ಬಾರದೆ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಸಂಗ್ರಹವಾದ ತ್ಯಾಜ್ಯವನ್ನು ಜನರು ರಸ್ತೆ ಬದಿ ಎಸೆದು ಹೋಗುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ.
ಕಳೆಯಿಂದ ಮುಚ್ಚಿಹೋದ ಚರಂಡಿ
ರಸ್ತೆ ಬದಿಯ ಕಳೆಗಿಡಗಳು ಬೃಹತ್‌ ಆಕಾರದಲ್ಲಿ ಬೆಳೆದ ಪರಿಣಾಮ ಚರಂಡಿಗಳು ಮಾಯವಾಗಿವೆ. ವಾಹನ ಸವಾರರಿಗೆ ಚರಂಡಿ ಮೇಲೆ ಬೆಳೆದ ಕಳೆಗಳು ಗೋಚರವಾಗದೆ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.ಪಾದಚಾರಿಗಳೂ ಚರಂಡಿ ಇದೆ ಎಂದು ತಿಳಿಯದೆ ಬೀಳುವ ಅಪಾಯವಿದೆ. ರಸ್ತೆ ಬದಿಯನ್ನು ಪೊದೆಗಳು ಆವರಿಸಿರುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ನಡೆದು ಹೋಗಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮತ್ತು ವಾರ್ಡ್‌ ಸದಸ್ಯರು ತಕ್ಷಣ ಈ ಸಮಸ್ಯೆಗೆ ಸ್ಪಂದಿಸಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

















































error: Content is protected !!
Scroll to Top