ರೆಂಜಾಳ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬೆರ್ಕೆ ಸಂಗಮ ಕ್ಷೇತ್ರ ಜೀರ್ಣೋದ್ಧಾರ ಸಂಕಲ್ಪ

ರೆಂಜಾಳ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬೆರ್ಕೆ ಸಂಗಮ ಕ್ಷೇತ್ರ ಜೀರ್ಣೋದ್ಧಾರ ಸಂಕಲ್ಪ
ಕಾರ್ಕಳ, ನ. 29 : ಸಂಪೂರ್ಣವಾಗಿ ಅಳಿದು ಹೋಗಿರುವ ರೆಂಜಾಳ ಗ್ರಾಮದ ಬೆರ್ಕೆ ಪರಿಸರದಲ್ಲಿರುವ ಸುಮಾರು 300 ವರ್ಷಗಳ ಇತಿಹಾಸವುಳ್ಳ ಪ್ರಾಚೀನ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಚಿತ್ರಕೂಟ, ನಾಗಬನ ಹಾಗೂ ರಕ್ತೇಶ್ವರಿ, ಕಲ್ಕುಡ ಪರಿವಾರ ದೈವಗಳ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸಲು ಊರವರು ಸಂಕಲ್ಪಿಸಿದ್ದಾರೆ. ಒಂದು ಕಾಲದಲ್ಲಿ ಢಕ್ಕೆಬಲಿ ನಡೆಯುತ್ತಿದ್ದ ಕಾರಣಿಕ ಕ್ಷೇತ್ರವಿದು.

ನಾಗಬನ

ಈ ಸ್ಥಳದಲ್ಲಿ ಸಂದೇಹ ನಿವಾರಣೆಗಾಗಿ ಹಾಗೂ ಸಮಸ್ಯೆಗಳ ಪರಿಹಾರಾರ್ಥವಾಗಿ ನ. 26ರಂದು ರೆಂಜಾಳ ಗ್ರಾಮದ ಅಸ್ರಣ್ಣ ಸುಬ್ರಹ್ಮಣ್ಯ ಉಪಾಧ್ಯಾಯರ ನೇತೃತ್ವದಲ್ಲಿ ಜಾರ್ಕಳ ಪ್ರಸಾದ್ ತಂತ್ರಿಯವರಿಂದ ತಾಂಬೂಲಾರೂಢ ಪ್ರಶ್ನೆ ನೆರವೇರಿದ್ದು, ಇಲ್ಲಿ ಕಲ್ಕುಡ ದೈವದ ಸಾನಿಧ್ಯವಿರುವುದು ಕಂಡುಬಂದಿದೆ. ತ್ವರಿತವಾಗಿ ಈ ಕ್ಷೇತ್ರ ಜೀರ್ಣೊದ್ಧಾರಗೊಂಡು ಕಾರಣಿಕ ಕ್ಷೇತ್ರವಾಗಿ ಮೆರೆಯಲಿದೆ ಎಂಬುದು ತಾಂಬೂಲಾರೂಢ ಪ್ರಶ್ನೆ ಸಂದರ್ಭದಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಗುತ್ತು ಬರ್ಕೆ ಹಾಗೂ ಗಣ್ಯರು ಜೀರ್ಣೋದ್ಧಾರದ ಪುಣ್ಯ ಕಾರ್ಯಕ್ಕೆ ಸಂಕಲ್ಪ ಮಾಡಿದ್ದಾರೆ.

ತಾಂಬೂಲಾರೂಢ ಪ್ರಶ್ನೆ

ಗ್ರಾಮದ ಭಕ್ತಾದಿಗಳು ಮುಂದೆ ನಡೆಯಲಿರುವ ಎಲ್ಲಾ ಪುಣ್ಯ ಕಾರ್ಯದಲ್ಲಿ ಭಾಗಿಯಾಗ ಬೇಕೆಂದು ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನ ಬೆರ್ಕೆ ಸಂಗಮ ಕ್ಷೇತ್ರ ರೆಂಜಾಳ, ಅಧ್ಯಕ್ಷರು ಹಾಗೂ ಗ್ರಾಮದ ಹತ್ತು ಸಮಸ್ತರು ವಿನಂತಿ ಮಾಡಿಕೊಂಡಿದ್ದಾರೆ.

















































































error: Content is protected !!
Scroll to Top