ಸ್ವರ್ಣಾರಾಧಾನದಲ್ಲಿ ಹಸಿರೇ ಉಸಿರು ತಂಡ

ಕಾರ್ಕಳ,ನ.29 : ತೆಳ್ಳಾರಿನ ಹಸಿರೇ ಉಸಿರು ಪರಿಸರ ಪ್ರೇಮಿಗಳ ಸಂಘಟನೆ 45ನೇ ವಾರದ ಸ್ವಚ್ಛತಾ ಕಾರ್ಯವನ್ನು ಸ್ವರ್ಣಾರಾಧನಾ ತಂಡದ ಆಶಯದಂತೆ ಸ್ವರ್ಣಾ ನದಿ ತಟದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಕೈಗೊಂಡಿತು.
ತೆಳ್ಳಾರಿನ ಮುಂಡ್ಲಿ ಅಣೆಕಟ್ಟು ಬಳಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.ಈ ಸಂದರ್ಭದಲ್ಲಿ ತಂಡದ ಎಲ್ಲಾ ಸದಸ್ಯರಿಗೆ ಟೀ-ಶರ್ಟ್ ನೀಡಲಾಯಿತು. ಹಸಿರ ಮಧ್ಯೆ ವಿಶಾಲವಾಗಿ ಹರಿಯುವ ಈ ಸ್ವರ್ಣ ನದಿಯ ಉಳಿವಿಗಾಗಿ ಸ್ವರ್ಣಾ ನದಿ ಜಲಾಶಯದ ಸ್ವಚ್ಛತೆ ಮಾಡುವ ಒಂದು ದಿಟ್ಟ ಹೆಜ್ಜೆಯನ್ನು ಇರಿಸಲಾಗಿದೆ. ಜಲಚರಗಳ ಜೀವ ಉಳಿಸುವ,ನೀರಿನ ನೈರ್ಮಲ್ಯವನ್ನು ಕಾಪಾಡುವ ಕಾರ್ಯವನ್ನು ಸಂಕಲ್ಪಿಸಲಾಗಿದೆ.


ವರದಿ : ಶ್ರದ್ಧಾ ಪೂಜಾರಿ,ಎಂಪಿಎಂ ಕಾಲೇಜು ಕಾರ್ಕಳ

a href="#" target="_blank">







































error: Content is protected !!
Scroll to Top