ವಿಶ್ವ ದಾಖಲೆಯ ಹೊಸ್ತಿಲಲ್ಲಿ ಕೊಹ್ಲಿ

ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇಂದು 89 ಬಹುಮೂಲ್ಯ ರನ್ ಗಳಿಸಿ ಔಟಾದರು. ಆ ಮೂಲಕ ಮತ್ತೊಂದು ವಿಶ್ವ ದಾಖಲೆಯ ಸನಿಹ ಬಂದು ನಿಂತಿದ್ದಾರೆ. ಇಂದಿಗೆ ಅವರ ಏಕದಿನ ಪಂದ್ಯಗಳ ಒಟ್ಟು ರನ್‌ 11,977. ಅಂದರೆ ಇನ್ನು 23 ರನ್ ಗಳಿಸಿದರೆ ಅತೀ ಕಡಿಮೆ ಇನ್ನಿಂಗ್ಸ್ ಮೂಲಕ 12000 ರನ್ ಗಳಿಸಿದ ವಿಶ್ವದಾಖಲೆ ಅವರದ್ದು ಆಗಲಿದೆ. ಕೊಹ್ಲಿ ಕೇವಲ 250 ಪಂದ್ಯಗಳಲ್ಲಿ ಈ ರನ್ ಪರ್ವತ ಪೇರಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ 59.29! ಕ್ರಿಕೆಟಿನ ಮೂರೂ ವಿಭಾಗಗಳಲ್ಲಿ 50+ ಸರಾಸರಿ ಹೊಂದಿರುವ ವಿಶ್ವದ ಒಬ್ಬನೇ ಆಟಗಾರ ಕೊಹ್ಲಿ! ODI ಪಂದ್ಯಗಳಲ್ಲಿ 43 ಶತಕಗಳನ್ನು ಕೂಡ ಕೊಹ್ಲಿ ದಾಖಲಿಸಿದ್ದಾರೆ. ಕ್ರಿಕೆಟ್ ದೇವರು ಸಚಿನ್ 463 ಏಕದಿನ ಪಂದ್ಯದಲ್ಲಿ ಆಡಿ ಮಾಡಿದ ಅಷ್ಟೂ ODI ದಾಖಲೆಗಳನ್ನು ವಿರಾಟ್ 300-350 ಪಂದ್ಯಗಳ ಒಳಗೆ ಮುರಿಯುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ಒಂದು ಕಡೆ ಭಾರತ ಆಸ್ಟ್ರೇಲಿಯಾದ ನೆಲದಲ್ಲಿ ಸತತ ಸೋಲುಗಳನ್ನು ಕಾಣುತ್ತಿದೆ. ಆದರೆ ಮತ್ತೊಂದೆಡೆ ವಿರಾಟ್ ಕೊಹ್ಲಿ ಮೂರನೇ ಪಂದ್ಯದಲ್ಲಿ 23 ರನ್ ಗಳಿಸಿದರೆ ಇನ್ನೊಂದು ವಿಶ್ವ ವಿಕ್ರಮವನ್ನು ಮುಡಿಗೆ ಏರಿಸಿ ಕೊಳ್ಳಬಹುದು. ಅವರಿಗೆ ಶುಭವಾಗಲಿ.









































































































error: Content is protected !!
Scroll to Top