Sunday, September 26, 2021
spot_img
Homeದೇಶನೈತಿಕತೆಯ ತೊಳಲಾಟದಲ್ಲಿ ನಿತೀಶ್‌ : ಮುಖ್ಯಮಂತ್ರಿಯಾಗಲು ಹಿಂದೇಟು

ನೈತಿಕತೆಯ ತೊಳಲಾಟದಲ್ಲಿ ನಿತೀಶ್‌ : ಮುಖ್ಯಮಂತ್ರಿಯಾಗಲು ಹಿಂದೇಟು

ಪಾಟ್ನ, ನ.12 : ವಿಧಾನಸಭೆ ಚುನಾವಣೆಯಲ್ಲಿ ಎನ್‌ ಡಿಎ ಮೈತ್ರಿಕೂಟ ನಿಚ್ಚಳ ಬಹುಮತ ಪಡೆದುಕೊಂಡಿದ್ದರೂ ನಿತೀಶ್‌ ಕುಮಾರ್‌ ಮುಖ್ಯಮಂತ್ರಿಯಾಗಳು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಬಿಜೆಪಿಗಿಂತ ಕಡಿಮೆ ಸ್ಥಾನಗಳನ್ನು ಗಳಿಸಿರುವುದು.
ಬಿಜೆಪಿಯೇನೂ ನಿನ್ನೆಯೇ ಮೈತ್ರಿಧರ್ಮ ಪಾಲಿಸುವ ಸಲುವಾಗಿ ಮಿತ್ರಪಕ್ಷ ಜೆಡಿಯುಗೆ ಕಡಿಮೆ ಸ್ಥಾನಗಳು ಬಂದಿದ್ದರೂ ಚುನಾವಣೆಗಿಂತ ಮೊದಲು ನೀಡಿದ ಆಶ್ವಾಸನೆಯಂತೆ ನಿತೀಶ್‌ ಕುಮಾರ್‌ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದರೂ ಸ್ವತಃ ನಿತೀಶ್‌ಗೆ ನಾಲ್ಕನೇ ಸಲ ಪಟ್ಟವೇರಲು ನೈತಿಕತೆಯ ಭೀತಿ ಕಾಡುತ್ತಿದೆ.
ನಿಚ್ಚಳ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದೆ. ಎನ್ ಡಿಎ 125 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ ಇದರಲ್ಲಿ ಜೆಡಿಯು ಪಾಲು 45 ಸ್ಥಾನಗಳು ಮಾತ್ರ. ಬಿಜೆಪಿ ಏಕಾಂಗಿಯಾಗಿ 74 ಸ್ಥಾನಗಳಲ್ಲಿ ಗೆದ್ದಿದೆ. ಸಾಮಾನ್ಯವಾಗಿ ಮೈತ್ರಿಕೂಟದಲ್ಲಿ ಅತಿದೊಡ್ಡ ಪಕ್ಷದ ನಾಯಕ ಮುಖ್ಯಮಂತ್ರಿಯಾಗುವುದು ವಾಡಿಕೆ. ಆದರೆ ಬಿಜೆಪಿ ಮೈತ್ರಿಧರ್ಮ ಪಾಲನೆಗಾಗಿ ಮುಖ್ಯಮಂತ್ರಿ ಪಟ್ಟವನ್ನು ತ್ಯಾಗ ಮಾಡುವ ಔದಾರ್ಯ ತೋರಿಸಿದೆ. ಆದರೆ ನಿತೀಶ್‌ಗೆ ಈ ಔದಾರ್ಯವನ್ನು ಒಪ್ಪಿಕೊಳ್ಳಲು ಹಿಂಜರಿಕೆಯಾಗುತ್ತಿದೆ.
ಈಗ ಬಿಜೆಪಿಯ ಔದಾರ್ಯವನ್ನು ಒಪ್ಪಿಕೊಂಡರೆ ಮುಂದಿನ ದಿನಗಳಲ್ಲಿ ಆಡಳಿತಕ್ಕೆ ಅಡಚಣೆಯಾಗಬಹುದು ಎಂಬ ಆತಂಕ ನಿತೀಶ್‌ಗಿದೆ. ಇದನ್ನು ದೂರ ಮಾಡುವ ಸಲುವಾಗಿ ಬಿಜೆಪಿ ನಿತೀಶ್‌ ಹಿಂದಿನಂತೆಯೇ ಸ್ವತಂತ್ರವಾಗಿ ಆಡಳಿತ ನಡೆಸಬಹುದು. ಅವರ ನಿರ್ಧಾರದಲ್ಲಿ ನಾವು ಯಾವ ರೀತಿಯಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಭರವಸೆ ನೀಡಿದೆ. ಆದರೂ ನಿತೀಶ್‌ ಹಿಂದೇಟು ಹಾಕುತ್ತಿದ್ದಾರೆ. ನಿನ್ನೆ ನಿತೀಶ್‌ ಮಾಡಿರುವ ಜನಾದೇಶವೇ ಪರಮೋಚ್ಛ ಎಂಬ ಟ್ವೀಟ್‌ ಬರೀ ಔಪಚಾರಿಕತೆಯ ಹೇಳಿಕೆಯಲ್ಲ ಇದಕ್ಕೂ ಮಿಗಿಲಾದ ಅರ್ಥವನ್ನು ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!