ನಟ ಅರ್ಜುನ್‌ ರಾಮ್‌ಪಾಲ್‌ ಮನೆಗೆ ಎನ್‌ಸಿಬಿ ದಾಳಿ

ಮುಂಬಯಿ, ನ.9: ನಿನ್ನೆಯಷ್ಟೇ ಖ್ಯಾತ ನಿರ್ಮಾಪಕ ಫಿರೋಜ್‌ ನಾಡಿಯಡ್‌ವಾಲಾ ಮನೆಗೆ ದಾಳಿ ಮಾಡಿ ಅವರ ಹೆಂಡತಿಯನ್ನು ಬಂಧಿಸಿದ್ದ ನಾರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೊದ ಅಧಿಕಾರಿಗಳು ಇಂದು ಜನಪ್ರಿಯ ನಟ ಅರ್ಜುನ್‌ ರಾಮ್‌ಪಾಲ್‌ ಮನೆ ಮೇಲೆ ದಾಳಿ ಮಾಡಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಂಶಯಾಸ್ಪದ ಸಾವಿನಿಂದ ಪ್ರಾರಂಭವಾಗಿರುವ ಬಾಲಿವುಡ್‌ ಗಣ್ಯರ ಡ್ರಗ್‌ ನಂಟಿನ ಪ್ರಕರಣ ಈಗ ಅಂಗ್ರಪಂಕ್ತಿಯ ಘಟಾನುಘಟಿಗಳಿಗೆ ಸುತ್ತಿಕೊಳ್ಳುವ ಲಕ್ಷಣ ಕಾಣಿಸಿದೆ.
ಅರ್ಜುನ್‌ ರಾಮ್‌ ಪಾಲ್‌ ಮನೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಇದುವರೆಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ.















error: Content is protected !!
Scroll to Top