Tuesday, September 28, 2021
spot_img
Homeದೇಶಮತ್ತೆ ವಿವಾದಕ್ಕೀಡಾದ ತನಿಷ್ಕ್‌ ಜುವೆಲ್ಲರಿ ಜಾಹೀರಾತು

ಮತ್ತೆ ವಿವಾದಕ್ಕೀಡಾದ ತನಿಷ್ಕ್‌ ಜುವೆಲ್ಲರಿ ಜಾಹೀರಾತು

ದಿಲ್ಲಿ, ನ.9: ಕೆಲ ಸಮಯದ ಹಿಂದೆ ‘ಲವ್ ಜಿಹಾದ್’ ಥೀಮ್‌ ಇರುವ ಜಾಹೀರಾತು ಪ್ರಕಟಿಸಿ ವ್ಯಾಪಕ ಆಕ್ರೋಶಕ್ಕೆ ತುತ್ತಾಗಿದ್ದ ತನಿಷ್ಕ್‌ ಜುವೆಲ್ಲರಿ ಈಗ ದೀಪಾವಳಿ ಹಬ್ಬಕ್ಕೆ ಪಟಾಕಿ ಸುಡಬೇಡಿ ಎಂದು ಉಪದೇಶ ಮಾಡಿ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ಹೊಸ ಜಾಹೀರಾತಿನಲ್ಲಿ ಮಾಡೆಲ್ ಒಬ್ಬಳು, “ಪಟಾಕಿ ಬೇಡ, ಯಾರೊಬ್ಬರೂ ಕೂಡ ಪಟಾಕಿಯನ್ನು ಸುಡಬಾರದು. ಸಾಕಷ್ಟು ದೀಪ, ಭರವಸೆ ಮತ್ತು ಸಕಾರಾತ್ಮಕತೆಯನ್ನು ಬೆಳಗಿಸಬೇಕು” ಎನ್ನುತ್ತಾಳೆ. ತನಿಷ್ಕ್ ಜ್ಯುವೆಲ್ಲರಿಯ ಈ ಜಾಹೀರಾತು ಜನರಿಗೆ ಇಷ್ಟವಾಗಿಲ್ಲ.
ಶಾಸಕ ಮತ್ತು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಹಿಂದುಗಳಿಗೆ ಸಲಹೆ ನೀಡುವ ಈ ಜಾಹೀರಾತಿನ ವಿರುದ್ಧ ಕಿಡಿಕಾರಿದ್ದಾರೆ. ಕಂಪನಿಗಳು ತಮ್ಮ ಉತ್ಪನ್ನವನ್ನು ಮಾರಾಟ ಮಾಡುವ ಮೇಲೆ ಗಮನ ಹರಿಸಬೇಕೇ ಹೊರತು ನಾವು ಹೇಗೆ ಹಬ್ಬ ಆಚರಿಸಬೇಕು ಎಂದು ಬೋಧನೆ ಮಾಡಬಾರದು ಎಂದಿದ್ದಾರೆ.
ಟ್ವೀಟ್ ಮಾಡಿರುವ ಅವರು, “ಯಾಕೆ ಯಾರಾದರೂ ನಮ್ಮ ಹಬ್ಬವನ್ನು ಹೇಗೆ ಆಚರಿಸಬೇಕು ಎನ್ನುವ ಬಗ್ಗೆ ನಮಗೆ ಬೋಧಿಸಬೇಕು? ಕಂಪನಿಗಳು ತಮ್ಮ ಉತ್ಪನ್ನವನ್ನು ಮಾರಾಟ ಮಾಡುವ ಕಡೆ ಗಮನ ನೀಡಬೇಕು, ಪಟಾಕಿಗಳಿಂದ ಹೇಗೆ ದೂರವಿರಬೇಕು ಎನ್ನುವ ಬಗ್ಗೆ ಬೋಧನೆ ಮಾಡಬಾರದು. ನಾವು ದೀಪ ಹೊತ್ತಿಸುತ್ತೇವೆ, ಹಸಿರು ಪಟಾಕಿಗಳನ್ನು ಸಿಡಿಸುತ್ತೇವೆ ಮತ್ತು ಸಿಹಿ ಹಂಚುತ್ತೇವೆ. ನಮ್ಮನ್ನು ಸೇರಿಕೊಳ್ಳಿ, ಆಗ ನಿಮಗೆ ಏಕತ್ವಂ ಅರಿವಾಗುತ್ತದೆ” ಎಂದಿದ್ದಾರೆ.‌

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!