ಐಪಿಲ್ ರೇಸ್ ನಿಂದ ಆರ್‌ಸಿಬಿ ಹೊರಗೆ

ತನ್ನ ತಪ್ಪುಗಳಿಂದ ಪಾಠ ಕಲಿಯದ ಒಂದು ತಂಡ ಇದ್ದರೆ ಅದು ಆರ್‌ಸಿಬಿ ಮಾತ್ರ. ಅತಿಯಾದ ನಿರೀಕ್ಷೆಯಿಂದ ಆರ್‌ಸಿಬಿ ತಂಡವನ್ನು ಬೆಂಬಲಿಸಿದ ಕೋಟಿ ಕೋಟಿ ಅಭಿಮಾನಿಗಳಿಗೆ ಭಾರೀ ನಿರಾಸೆ ! ಈ ಬಾರಿ ಕಪ್ ನಮ್ದೇ ಎಂದು ಘೋಷಣೆ ಮಾಡಿ ಕೂಟಕ್ಕೆ ಬಂದಿದ್ದ ಬೆಂಗಳೂರು ತಂಡ ಈ ಬಾರಿ ತಪ್ಪ್‌ ನಂದೇ ಎಂದು ವಾಪಸ್ ಹೋಗಬೇಕಾಯಿತು. ಎಲ್ಲವೂ ಸ್ವಯಂಕೃತ ಅಪರಾಧ. ಅತಿಯಾದ ನಂಬಿಕೆ ಮತ್ತು ನಿರೀಕ್ಷೆಗಳು ಯಾವಾಗಲೂ ತುಂಬಾ ನೋವು ಕೊಡುತ್ತವೆ. ಆರ್‌ಸಿಬಿಯ ಸೋಲಿಗೆ ಪ್ರಮುಖವಾದ ಕಾರಣ ಅಂದರೆ ಅತಿಯಾದ ಪ್ರಯೋಗಗಳು. ಆರಂಭದ ಪಂದ್ಯದಿಂದ ನೋಡುತ್ತಾ ಬನ್ನಿ, ಅತಿ ಹೆಚ್ಚು ಬಾರಿ ಆಟಗಾರರನ್ನು ಬದಲಾಯಿಸಿದ ತಂಡ ಅದು ಆರ್‌ಸಿಬಿ ಹಿಂದಿನ ಪಂದ್ಯದಲ್ಲಿ ೨೦೦ ಬ್ಯಾಟಿಂಗ್ ಸರಾಸರಿ ಜೊತೆಗೆ ಮ್ಯಾಚ್ ಗೆದ್ದು ಕೊಟ್ಟ ಎಬಿಡಿಯನ್ನು ಮುಂದಿನ ಪಂದ್ಯದಲ್ಲಿ ಕೊನೆಯ ಹಂತದಲ್ಲಿ ಆಡಲು ಕಳುಹಿಸಿಕೊಟ್ಟದ್ದು, ಮೊಯಿನ್ ಖಾನ್ ರಂಥ ಆಲ್ರೌಂಡರ್ ಆಟಗಾರನನ್ನು ಹೊರಗಿಟ್ಟದ್ದು, ಫಾರ್ಮಲ್ಲಿ ಇಲ್ಲದ ಸ್ಟೈನ್ ಅವರನ್ನು ಸತತವಾಗಿ ಆಡಿಸಿದ್ದು, ಡೆತ್ ಓವರಲ್ಲಿ ದುಬಾರಿಯಾದ ಉಡಾನ್‌ ಅನ್ನು ಮತ್ತೆ ಮತ್ತೆ ಆರಿಸಿದ್ದು ಏನು ತೋರಿಸಿಕೊಡುತ್ತದೆ?
ನಿನ್ನೆಯ ಪಂದ್ಯವನ್ನು ಗಮನಿಸಿ. ಗೆಲ್ಲಲೇ ಬೇಕಾದ ಪಂದ್ಯ ಅದು. ಒತ್ತಡ ಇದ್ದೇ ಇರುತ್ತದೆ. ಅಂಥ ಪಂದ್ಯದಲ್ಲಿ ಆರಂಭಿಕನಾಗಿ ಕೊಹ್ಲಿ ಬರುವ ಅಗತ್ಯ ಏನಿತ್ತು? ಶಿವಂ ದುಬೆ ಯಾವುದಾದರೂ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದು ನಿಮಗೆ ನೆನಪಿದೆಯೇ? ಮೊಯಿನ್ ಖಾನ್‌ ಗೆ ಕೊಟ್ಟಿದ್ದು ಒಂದೇ ಓವರ್. ಅದರಲ್ಲಿ ಆತ ಒಂದೇ ರನ್ ಕೊಟ್ಟಿದ್ದ. ಮುಂದೆ ಆತನಿಗೆ ಬೌಲಿಂಗ್ ಕೂಡಲೇ ಇಲ್ಲ! ಡೆತ್ ಓವರ್ ಹಂತದಲ್ಲಿ ಅತಿ ಹೆಚ್ಚು ರನ್ ಸೋರಿ ಹೋದದ್ದು ಥರ್ಡ್ ಮ್ಯಾನ್ ಮೂಲಕ. ಔಟ್ ಸೈಡ್ ಆಫ್ ಸ್ಟಾಂಪ್ ಬೌಲಿಂಗ್ ಮಾಡುವಾಗಲೂ ಥರ್ಡ್ ಮ್ಯಾನ್ ಖಾಲಿ ಇತ್ತು. ಟಾರ್ಗೆಟ್‌ ಚಿಕ್ಕದು ಇರುವಾಗ ಬೌಲರ್ಸ್ ವಿಕೆಟ್ ಕೀಳಲು ಪ್ರಯತ್ನ ಮಾಡಬೇಕು.ಆದರೆ ಬೌಲರ್ಸ್ ವಿಕೆಟ್ ಮೇಲೆ ಬೌಲಿಂಗ್ ಮಾಡಲೇ ಇಲ್ಲ! ಹೀಗೆ ಸ್ವಯಂಕೃತ ಅಪರಾಧಗಳು ಆರ್‌ಸಿಬಿ ತಂಡವನ್ನು ಹೊರಗೆ ದಬ್ಬಿದವು. ಹಿಂದಿನ ದಿನ ರಾತ್ರಿ ವಿರಾಟ್ ಕೊಹ್ಲಿ ಹುಟ್ಟು ಹಬ್ಬದ ಕೇಕ್ ಕತ್ತರಿಸಿ ಹುಡುಗರು ಡ್ಯಾನ್ಸ್ ಮಾಡಿದ ವಿಡಿಯೋ ನೋಡಿದಾಗಲೇ ನಮಗೆ ಅನ್ನಿಸಿತ್ತು. ಏನಿದ್ದರೂ ಹೈದರಾಬಾದ್ ತಂಡಕ್ಕೆ , ಅವರ ಟೀಮ್ ಎಫರ್ಟ್ಸ್, ಅವರ ಗೆಲ್ಲಬೇಕು ಎನ್ನುವ ಪ್ಯಾಶನ್‌ ಗೆ ನಮ್ಮ ಅಭಿನಂದನೆ. ಸಾರಿ ಆರ್‌ಸಿಬಿ ನೀವು ನಮ್ಮನ್ನು ನಿರಾಸೆಗೊಳಿಸಿದ್ದೀರಿ.









































































































error: Content is protected !!
Scroll to Top