ಲಾಕ್‌ ಡೌನ್ ಘೋಷಣೆ ಕೇಳಿ ಪೇರಿಕಿತ್ತ ಜನರಿಂದ ಉಂಟಾಯಿತು 700 ಕಿ. ಮೀ. ಟ್ರಾಫಿಕ್‌ ಜಾಮ್‌

0

ಪ್ಯಾರಿಸ್‌, ಅ.31 : ಕೊರೊನಾ ಅವಾಂತರಗಳು ಇನ್ನೂ ಮುಗಿದಿಲ್ಲ. ಯುರೋಪಿನಲ್ಲಿ ಎರಡನೇ ಅಲೆ ಅಪ್ಪಳಿಸಲು ತೊಡಗಿ ಜನರು ಭಯಭೀತರಾಗಿದ್ದಾರೆ. ಫ್ರಾನ್ಸ್‌ನಲ್ಲಿ ಕೂಡ ಮತ್ತೊಮ್ಮೆ ಲಾಕ್‌ ಡೌನ್‌ ಹೇರಲಾಗಿದೆ. ಗುರುವಾರ ಸಂಜೆ ಸರಕಾರ ಲಾಕ್ ಡೌನ್‌ ಘೋಷಣೆ ನಿರ್ಧಾರ ಪ್ರಕಟಿಸಿದ್ದೇ ತಡ ಪ್ಯಾರಿಸ್‌ನಿಂದ ಜನರು ಪೇರಿಕೀಳತೊಡಗಿದ್ದಾರೆ. ಇದರಿಂದ ಇಡೀ ನಗರ ಗೊಂದಲ ಗೂಡಾಯಿತು. ರಸ್ತೆಗಳಲ್ಲಿ ಎಲ್ಲಿ ನೋಡಿದರಲ್ಲಿ ವಾಹನಗಳ ಸಾಲು. ಪ್ಯಾರಿಸ್‌ ನಗರದಲ್ಲಿ ಬರೋಬ್ಬರಿ 700 ಕಿ.ಮೀ. ಉದ್ದಕ್ಕೆ ಟ್ರಾಫಿಕ್‌ ಜಾಮ್‌ ಆಗಿ ನಗರ ಬಿಟ್ಟು ಪಾರಾಗಲು ಹೊರಟವರೆಲ್ಲ ನಡುರಸ್ತೆಯಲ್ಲಿ ಸಿಕ್ಕಿ ಬಿದ್ದರು.
ಲಾಕ್‌ ಡೌನ್‌ ಘೋಷಣೆ ಹೊರಬಿದ್ದದ್ದೇ ತಡ ಎಲ್ಲಿ ನೋಡಿದರಲ್ಲೆ ಜನವೋ ಜನ. ಮಾಲ್‌, ಸ್ಟೋರ್‌, ಹೋಟೇಲ್‌ ಹೀಗೆ ಎಲ್ಲೆಲ್ಲೂ ಕಾಲು ಹಾಕಲು ಕೂಡ ಜಾಗ ಇರಲಿಲ್ಲ. ಎಲ್ಲರೂ ಸಿಕ್ಕಿದ್ದನ್ನು ಖರೀದಿಸುವ ಧಾವಂತದಲ್ಲಿದ್ದರು.
ಯುರೋಪಿನಲ್ಲಿ ಎರಡನೇ ಹಂತದ ಕೊರೊನಾ ಹಾವಳಿ ಶುರುವಾಗಿದ್ದು, ಹಲವು ದೇಶಗಳು ಈಗಾಗಲೇ ಇನ್ನೊಂದು ಸುತ್ತಿನ ಲಾಕ್‌ ಡೌನ್‌ ಘೋಷಿಸಿವೆ. ಫ್ರಾನ್ಸ್‌ ನಲ್ಲಿ ಶುಕ್ರವಾರದಿಂದ ಲಾಕ್‌ ಡೌನ್ ಜಾರಿಗೆ ಬಂದಿದೆ. ಗುರುವಾರ ಸಂಜೆ ಅಧ್ಯಕ್ಷ ಇಮಾನುವೆಲ್‌ ಮ್ಯಾಕ್ರೊನ್‌ ಲಾಕ್‌ ಡೌನ್‌ ನಿರ್ಧಾರ ಪ್ರಕಟಿಸಿದರು. ಈ ಘೋಷಣೆ ಕೇಳಿದ್ದೇ ತಡ ಪ್ಯಾರಿಸ್‌ ನಗರದಲ್ಲಿದ್ದ ಜನರು ನಗರ ಬಿಟ್ಟು ಹೊರಹೋಗಲು ಮುಗಿಬಿದ್ದರು.
ಫ್ರಾನ್ಸ್‌ನಲ್ಲಿ ಶುಕ್ರವಾರದಿಂದ ಕಟ್ಟುನಿಟ್ಟಿನ ಲಾಕ್‌ ಡೌನ್‌ ಜಾರಿಯಾಗಿದೆ. ಇಡೀ ದಿನ ಜನರಿಗೆ ಮನೆಯಲ್ಲಿ ಇರಲು ಸೂಚಿಸಲಾಗಿದೆ. ವೈದ್ಯಕೀಯದಂಥ ತುರ್ತು ಅಗತ್ಯಕ್ಕೆ ದಿನದಲ್ಲಿ ಒಂದು ತಾಸು ಮನೆಯಿಂದ 1 ಕಿ. ಮೀ. ವ್ಯಾಪ್ತಿಗೆ ಮಾತ್ರ ಹೋಗಿ ಬರಲು ಅನುಮತಿ ನೀಡಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದವರಿಗೆ ಭಾರಿ ದಂಡ ವಿಧಿಸಲಾಗುತ್ತದೆ. ಹೊಟೇಲ್ , ಬಾರ್‌, ಪಬ್‌ ಗಳನ್ನು ಮುಚ್ಚಲಾಗಿದೆ.

Previous articleಹುಬ್ಬಳ್ಳಿಯಲ್ಲಿ ನಿರ್ಮಾಣವಾಗುತ್ತಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲಾಟ್ ಫಾರ್ಮ್‌ ‌
Next articleಕನ್ನಡಿಗರ ಅನಾಥ ಪ್ರಜ್ಞೆ ಮತ್ತು ಕೆಲವು ಹಕ್ಕೊತ್ತಾಯಗಳು

LEAVE A REPLY

Please enter your comment!
Please enter your name here