
ಹುಬ್ಬಳ್ಳಿ, ಅ. 31: ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲಾಟ್ ಫಾರ್ಮ್ ಹೊಂದಿದ ಹಿರಿಮೆ ಸದ್ಯದಲ್ಲೇ ಕರ್ನಾಟಕಕ್ಕೆ ಸಿಗಲಿದೆ. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿದೆ ಈ ಪ್ಲಾಟ್ ಫಾರ್ಮ್.
ಪ್ರಸ್ತುತ ಹುಬ್ಬಳ್ಳಿ ನಿಲ್ದಾಣದ ಪ್ಲಾಟ್ ಫಾರ್ಮ್ ಉದ್ದ 550 ಮೀಟರ್ ಇದೆ. ಇದನ್ನು 1,400 ಉದ್ದಕ್ಕೆ ವಿಸ್ತರಿಸುವುದ ಎಂದು ಮೊದಲು ನಿರ್ಧರಿಸಲಾಗಿತ್ತು. ಅನಂತರ 1,505 ಮೀಟರ್ ಉದ್ದದ ಪ್ಲಾಟ್ ಫಾರ್ಮ್ ನಿರ್ಮಿಸಲು ನಿರ್ಧರಿಸಲಾಯಿತು.
ಪ್ರಸ್ತುತ ಉತ್ತರ ಪ್ರದೇಶದ ಗೋರಖಪುರ ರೈಲು ನಿಲ್ದಾಣದ 1,366 ಕಿ.ಮೀ. ಉದ್ದದ ಪ್ಲಾಟ್ ಫಾರ್ಮ್ ಜಗತ್ತಿನ ಅತಿ ಉದ್ದದ ಪ್ಲಾಟ್ ಫಾರ್ಮ್ ಎಂಬ ಹಿರಿಮೆಯನ್ನು ಹೊಂದಿದೆ. ಇದು ನಿರ್ಮಾಣವಾಗಿರುವುದು 2013ರಲ್ಲಿ.
ಹುಬ್ಬಳ್ಳಿ ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಿರ್ಮಾಣ ಕಾರ್ಯ ಇನ್ನು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.