ಆಗಾಗ ಕೈಕೊಡುತ್ತಿದ್ದ 2.5 ಕೋ.ರೂ. ಬೆಲೆಯ ಕಾರನ್ನು ಸುಟ್ಟು ಹಾಕಿದ ಭೂಪ


ಮಾಸ್ಕೊ : ಹೊಸದಾಗಿ ಖರೀದಿಸಿದ ಕಾರಿನಲ್ಲಿ ತಾಂತ್ರಿಕ ದೋಷ ಕಂಡುಬಂದರೆ ನಾವು ಕಂಪೆನಿಗೆ ದೂರು ನೀಡುತ್ತೇವೆ, ಮತ್ತೂ ದೋಷ ಸರಿ ಆಗದಿದ್ದರೆ ಕಾರನ್ನೇ ವಾಪಾಸು ಕೊಡುತ್ತೇವೆ. ಆದರೆ ರಷ್ಯಾದ ಈ ಯುವಕ ಆಗಾಗ ಕೈಕೊಡುತ್ತಿದ್ದ ಹೊಸ ಕಾರಿಗೆ ಕಾಣಿಸಿದ ಗತಿಯನ್ನು ನೋಡಿದರೆ ನೀವು ಬೆಚ್ಚಿಬೀಳುವುದು ಖಂಡಿತ.
ಮಿಖಾಯಿಲ್‌ ಲಿತ್ವಿನ್‌ ಎಂಬ ಈ ಯುವಕ ಕಳೆದ ವರ್ಷವಷ್ಟೇ ಮರ್ಸಿಡಿಸ್‌ -ಎಎಂಜಿ ಜಿಟಿ 63 ಮೋಡೆಲಿನ ಕಾರು ಖರೀದಿಸಿದ್ದ. ಭಾರತೀಯ ರೂಪಾಯಿಯಲ್ಲಿ ಇದರ ಬೆಲೆ ಹೆಚ್ಚುಕಡಿಮೆ 2.5 ಕೋ. ರೂ. ಆಗುತ್ತದೆ. ಆದರೆ ಕೆಲವೇ ಸಮಯದಲ್ಲಿ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಐದು ಸಲ ಕಂಪೆನಿಯವರು ಬಂದು ಕೊಂಡು ಹೋಗಿ ಮಾಡಿಕೊಟ್ಟು ಹೋದರು. ಆದರೆ ಕಾರು ಮನೆಗೆ ಬಂದ ಎರಡು ದಿನದಲ್ಲೇ ಮತ್ತೆ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಇದು ಪದೇಪದೆ ಪುನರಾವರ್ತನೆಯಾದಾಗ ಮಿಖಾಯಿಲ್‌ ರೋಸಿ ಹೋದ. ಒಂದು ದಿನ ಕಾರನ್ನು ಡ್ರೈವ್‌ ಮಾಡಿಕೊಂಡು ಹೊಲಕ್ಕೆ ಹೋದ. ಹೋಗುವಾಗಲೇ ಕಾರಿನ ಢಿಕ್ಕಿ ತುಂಬ ಕ್ಯಾನಿನಲ್ಲಿ ಪೆಟ್ರೋಲು ತುಂಬಿಸಿಕೊಂಡು ಹೋಗಿದ್ದ. ಹೊಲದ ಮಧ್ಯೆ ಕಾರು ನಿಲ್ಲಿಸಿ ಏಳೆಂಟು ಕ್ಯಾನ್‌ ಪೆಟ್ರೋಲನ್ನು ಕಾರಿಗೆ ಸುರಿದು ಒಂದಷ್ಟು ಪೆಟ್ರೋಲನ್ನು ಹೊಲದಲ್ಲಿ ಉದ್ದಕ್ಕೂ ಸುರಿದುಕೊಂಡು ಹೋದ.ಬಳಿಕ ಯಾವುದೋ ಒಂದು ತಿಂಡಿಯನ್ನು ಬೆಂಕಿಯಲ್ಲಿ ಕರಿದು ತಿಂದು ಅದೇ ಬೆಂಕಿಯಿಂದ ಕಾರನ್ನು ಸುಟ್ಟು ಹಾಕಿದ.
ಅನಂತರ ಮೊದಲೇ ತಂದು ನಿಲ್ಲಿಸಿದ್ದ ಹಳೇ ಕಾರಿನಲ್ಲಿ ಹೊರಟು ಹೋದ. ಯೂಟ್ಯೂಬ್‌ನಲ್ಲಿ ಕಾರು ಸುಡುವ ವೀಡಿಯೊ ಸಖತ್‌ ವೈರಲ್‌ ಆಗಿದೆ.ಕೆಲವೇ ದಿನಗಳಲ್ಲಿ ಈ ವೀಡಿಯೊವನ್ನು 1 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

































































error: Content is protected !!
Scroll to Top