ಬಿಹಾರದಲ್ಲಿ ನನ್ನ ರೇಪ್‌ ಆಗುತ್ತಿತ್ತು : ತಾನು ಪ್ರಚಾರ ಮಾಡಿದ ಅಭ್ಯರ್ಥಿ ವಿರುದ್ಧವೇ ಬಾಲಿವುಡ್‌ ನಟಿ ಅಮೀಷಾ ಪಟೇಲ್‌ ಆರೋಪ

ಮುಂಬಯಿ, ಅ.28: ಬಾಲಿವುಡ್‌ ನಟಿ ಅಮೀಷಾ ಪಟೇಲ್‌ ಬಿಹಾರದ ಚುನಾವಣಾ ಕಣದಲ್ಲಿರುವ ಲೋಕ ಜನಶಕ್ತಿ ಪಾರ್ಟಿಯ (ಎಲ್‌ ಜೆಪಿ) ಅಭ್ಯರ್ಥಿ ಪ್ರಕಾಶ್‌ ಚಂದ್ರ ಪರವಾಗಿ ಪ್ರಚಾರ ಮಾಡಿ ಈಗ ಅವರ ವಿರುದ್ಧವೇ ಅತ್ಯಾಚಾರ ಮತ್ತು ಕೊಲೆ ಬೆದರಿಕೆಯ ಆರೋಪ ಹೊರಿಸಿದ್ದಾರೆ.
ಬಿಹಾರದ ದೌಡ್‌ನಗರದಲ್ಲಿ ಪ್ರಕಾಶ ಚಂದ್ರ ಪರವಾಗಿ ಪ್ರಚಾರ ಮಾಡಲು ಹೋದ ವೇಳೆ ನಾನು ಪ್ರಚಾರ ಅಭ್ಯರ್ಥಿಯಿಂದಲೇ ಅತ್ಯಾಚಾರ ಮತ್ತು ಹತ್ಯೆಯಾಗುವ ಅಪಾಯ ಎದುರಾಗಿತ್ತು. ಜೀವಂತವಾಗಿ ಬದುಕಿ ಬರುವ ಸಲುವಾಗಿ ಏನೂ ಆಗಲಿಲ್ಲ ಎಂಬಂತೆ ನಟಿಸಿದೆ ಎಂದು ಅಮೀಷಾ ಹೇಳಿಕೊಂಡಿರುವ ಆಡಿಯೋ ಕ್ಲಿಪ್ಪಿಂಗ್‌ ಒಂದು ವೈರಲ್‌ ಆಗಿದೆ.
ಬಿಹಾರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಪ್ರಕಾಶ್‌ ಚಂದ್ರ ಪರವಾಗಿ ಪ್ರಚಾರ ಮಾಡಲು ಅಮೀಷಾ ಪಟೇಲ್‌ ಹೋಗಿದ್ದರು. ಕೆಲವು ಸಾರ್ವಜನಿಕ ಸಭೆಗಳಲ್ಲಿ ಅವರು ಭಾಗವಹಿಸಿದ್ದಾರೆ. ಇವೆಲ್ಲ ಭಯಾನಕ ಅನುಭವಗಳು. ಪ್ರಾಣ ಸಹಿತ ವಾಪಾಸು ಮುಂಬಯಿಗೆ ಬರುವ ಸಲುವಾಗಿ ನಾನು ಅವರ ಜೊತೆಗೆ ಸರಿಯಾಗಿದ್ದೇನೆ ಎಂಬಂತೆ ನಟಿಸುತ್ತಿದ್ದೆ. ಅವರು ನನ್ನನ್ನು ಅತ್ಯಾಚಾರ ಮಾಡಿ ಸಾಯಿಸುತ್ತಿದ್ದರು.
ಎಲ್ಲ ಹೊತ್ತು ಅಭ್ಯರ್ಥಿಯ ಜನರು ನನ್ನನ್ನು ಸುತ್ತುವರಿದಿರುತ್ತಿದ್ದರು. ಒಂದು ದಿನ ಪ್ರಕಾಶ ಚಂದ್ರ ಉದ್ದೇಶಪೂರ್ವಕವಾಗಿ ವಿಮಾನ ತಪ್ಪಿಸಿ ನಾನು ಒಂದು ಹಳ್ಳಿಯಲ್ಲಿ ತಂಗುವಂತೆ ಮಾಡಿದರು. ಆಗ ಪ್ರಾಣ ಭಯದಿಂದ ನಾನು ಯಾರಿಗೂ ಏನೂ ಹೇಳುವಂತಿರಲಿಲ್ಲ ಎಂದು ಅಮೀಷಾ ಹೇಳಿಕೊಂಡಿದ್ದಾರೆ.
ಪ್ರಕಾಶ ಚಂದ್ರ ಈ ಆರೋಪವನ್ನು ಅಲ್ಲಗಳೆದಿದ್ದು, ನಟಿಯ ಭದ್ರತೆಗಾಗಿ ಎಲ್ಲ ಏರ್ಪಾಡುಗಳನ್ನು ಮಾಡಿದ್ದೆವು. ಅವರು ಎದುರಾಳಿ ಅಭ್ಯರ್ಥಿ ಜೊತೆ ಡೀಲ್‌ ಮಾಡಿಕೊಂಡು ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಖಾಸಗಿ ವಾಹಿನಿಯೊಂದು ಅಮೀಷಾ ಪಟೇಲ್‌ ಆಡಿಯೋ ಕ್ಲಿಪ್‌ ಅನ್ನು ಪ್ರಸಾರ ಮಾಡಿದೆ.

































































error: Content is protected !!
Scroll to Top