ಕಳೆದ 8 ತಿಂಗಳಿಂದ ನಿರಂತರವಾಗಿ ದೇಶವನ್ನು ಕಾಡಿದ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದ ಕೊರೊನಾ ವೈರಸ್ ಕಳೆದ ಕೆಲವು ದಿನಗಳಿಂದ ಇಳಿಮುಖವಾಗುತ್ತಿರುವುದು ಶೂಭಸೂಚನೆ. ಉಡುಪಿ ಜಿಲ್ಲೆಯಲ್ಲೂ ಕೊರೊನಾ ಇಳಿಮುಖವಾಗುತ್ತಿದೆ. ದೇಶದಲ್ಲಿ ಗುಣಮುಖ ಪ್ರಮಾಣ ಶೇ.83 ಕ್ಕೆ ಏರಿದೆ ಅದೇ ರೀತಿ ಮರಣ ಪ್ರಮಾಣ ಶೇ.1.5 ರಷ್ಟು ಇಳಿದಿರುವುದು ಶುಭ ಸಂದೇಶ.ಉಡುಪಿ ಜಿಲ್ಲೆಯಲ್ಲಿ 1300 ರಷ್ಟು ಸಕ್ರಿಯ ಪ್ರಕರಣಗಳಿದ್ದು, ಮರಣ ಪ್ರಮಾಣ ಅದೇ ರೀತಿ ಹೊಸ ಪ್ರಕರಣಗಳು ಕಡಿಮೆಯಾಗುತ್ತಿರುವುದು ಜನತೆ ನಿಟ್ಟುಸಿರು ಬಿಡುವಂತಾಗಿದೆ.ಇದೇ ರೀತಿ ಮುಂದುವರಿದರೆ ಜನವರಿಗಾಗುವಾಗ ಕೊರೊನಾ ಸಂಪೂಣ೯ ನಿಯಂತ್ರಣಕ್ಕೆ ಬರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಮತ್ತಷ್ಟು ಜಾಗೃತರಾಗೋಣ
ಕೊರೊನಾ ಕಡಿಮೆಯಾಗಿದೆ ಎಂದು ಮೈಮರೆಯದೆ ಮತ್ತಷ್ಟು ಜಾಗೃತರಾಗಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಾಗಿದೆ. ಸಕಾ೯ರದ ದಂಡವನ್ನು ತಪ್ಪಿಸುವ ಸಲುವಾಗಿ ಮಾಸ್ಕ್ ಹಾಕದೆ, ನಮ್ಮ ಆರೋಗ್ಯ ಕಾಪಾಡಲು ಮಾಸ್ಕ್ ಹಾಕಿಕೊಳ್ಳಬೇಕು. ಕೋವಿಡ್ ನಿಯಮಗಳು ನಮ್ಮ ಜೀವನದ ಭಾಗವಾಗಬೇಕಾಗಿದೆ.
ಸಕಾ೯ರ ಈಗಾಗಲೇ ಕಾಲೇಜುಗಳನ್ನು ನ.17 ರಿಂದ ಪ್ರಾರಂಭಿಸುವ ಚಿಂತನೆ ಮಾಡಿರುವುದು ಉತ್ತಮವಾದರೂ ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ.
ಕೊರೊನಾದೊಂದಿಗೆ ಬದುಕು ಸಾಗಿಸುವಾಗ ನಮ್ಮ ಆರೋಗ್ಯದ ಜವಾಬ್ದಾರಿ ನಮ್ಮದಾಗಬೇಕೇ ಹೊರತು ಸಕಾ೯ರದ್ದಲ್ಲ. ಹೀಗಾಗಿ ಕೊರೊನಾ ಸಂಪೂಣ೯ ದೇಶ ಬಿಟ್ಟು ಹೋಗುವರೆಗೂ ಈ ನಿಯಮಗಳು ನಮ್ಮ ಜೀವನದ ಭಾಗವಾಗಿರಲಿ.
ಹೊಸ ಬದುಕು ರೂಪಿಸಿ
ಕೊರೊನಾದಿಂದ ನಮ್ಮೆಲ್ಲರ ಜೀವನ ಪಲ್ಲಟಗೊಂಡಿರುವುದು ನಿಜವಾದರೂ , ಹೊಸ ಬದುಕು ನಮ್ಮದಾಗಬೇಕಾದರೆ ಜೀವನದಲ್ಲಿ ಆಥಿ೯ಕ ಶಿಸ್ತು ಮೂಡಿ ಬರಬೇಕು. ಆದಾಯ ಗಳಿಸುವ ವಿನೂತನ ಯೋಜನೆ ಹಾಕಿಕೊಂಡು ಉತ್ತಮವಾಗಿ ಜೀವನ ಸಾಗಿಸಬೇಕು.
ಒಟ್ಟಾಗಿ ಕೊರೊನಾ ಕಲಿಸಿದ ಪಾಠ ಜೀವನ ಪರ್ಯಂತ ನೆನಪಿರಲಿ.
ರಾಘವೇಂದ್ರ ಪ್ರಭು,ಕವಾ೯ಲು








































































