ಐಪಿಲ್ 2020 -ಮುಂಬೈ ಇಂಡಿಯನ್ಸ್ ಎಲ್ಲರಿಗಿಂತ ಮುಂದೆ

ಈ ವರ್ಷದ ಐಪಿಲ್ ಕೂಟದಲ್ಲಿ 60 ಪಂದ್ಯಗಳಲ್ಲಿ 45 ಪಂದ್ಯಗಳು ಮುಗಿದಿವೆ. ಇದುವರೆಗಿನ ಪಾಯಿಂಟ್ಸ್ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ 11 ಪಂದ್ಯಗಳಲ್ಲಿ 7 ಪಂದ್ಯ ಗೆದ್ದಿದ್ದು 14 ಅಂಕಗಳೊಂದಿಗೆ ತುದಿಯಲ್ಲಿ ಕೂತಿದೆ. ನಿನ್ನೆಯ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅದು ಸೋತರೂ ಅದರ ಸ್ಥಾನ ಬದಲಾಗಿಲ್ಲ. ಯುವಪಡೆ ಡೆಲ್ಲಿ ಕ್ಯಾಪಿಟಲ್ ಅದೇ ರೀತಿ 11 ಪಂದ್ಯಗಳಲ್ಲಿ 7 ಗೆದ್ದು 14 ಅಂಕ ಗಳಿಸಿ ಎರಡನೇ ಸ್ಥಾನದಲ್ಲಿ ಇದೆ. ಮೂರನೇ ಸ್ಥಾನದಲ್ಲಿ RCB ತಂಡ ಏಳು ಪಂದ್ಯ ಗೆದ್ದು 14 ಪಾಯಿಂಟ್ಸ್ ಗಳಿಸಿದೆ. ನಿನ್ನೆಯ ಪಂದ್ಯದಲ್ಲಿ ಚೆನ್ನೈ ವಿರುದ್ಧ ಸೋತರೂ ಅದರ ಸ್ಥಾನ ಬದಲಾಗಿಲ್ಲ. ನಾಲ್ಕನೇ ಸ್ಥಾನದಲ್ಲಿ ಕೋಲ್ಕೊತ್ತ ಆರು ಪಂದ್ಯಗಳನ್ನು ಗೆದ್ದು 12 ಪಾಯಿಂಟ್ಸ್ ಗಳಿಸಿದೆ. ಸುನಿಲ್ ನಾರಾಯಣ್ ತಂಡಕ್ಕೆ ಮರಳಿರುವುದು ತಂಡಕ್ಕೆ ಆತ್ಮವಿಶ್ವಾಸ ಕೊಟ್ಟಿದೆ. ಇತ್ತೀಚಿನ ಎಲ್ಲಾ ಪಂದ್ಯಗಳನ್ನು ಗೆಲ್ಲುತ್ತಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಚೇತರಿಕೆಯ ಹಾದಿಯಲ್ಲಿದೆ. ಇನ್ನುಳಿದ ಮೂರು ತಂಡಗಳು (ಚೆನ್ನೈ,ಹೈದರಾಬಾದ್, ರಾಜಸ್ಥಾನ್ ರಾಯಲ್ಸ್) ಪ್ಲೇ ಆಫ್ ಸುತ್ತಿಗೆ ಪ್ರವೇಶ ಪಡೆಯುವುದು ಕಷ್ಟ ಎಂದೇ ಹೇಳಬಹುದು.















































































error: Content is protected !!
Scroll to Top