ಕಾರ್ಕಳ, ಅ.23 : ಶಿಕ್ಷಕಿ ಮತ್ತು ಲೇಖಕಿ ಸೀಮಾ ಆರ್. ಕಾಮತ್ ಅವರ ಚೊಚ್ಚಲ ಕೃತಿ ಕನ್ನಡದ ಕವಿತೆಗಳ ಗುಚ್ಛ “ಮತ್ತೆ ಹುಟ್ಟುವನು ನೇಸರ” ಬಿಡುಗಡೆಗೆ ಸಿದ್ಧವಾಗಿದೆ. ಅ. 29ರಂದು ಸಂಜೆ 4 ಗಂಟೆಗೆ ಕಾರ್ಕಳದ ಭುವನೇಂದ್ರ ಪ್ರೌಢಶಾಲೆಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ವಿವಿಧ ಗಣ್ಯರು ಮತ್ತು ಸಾಹಿತಿಗಳು ಈ ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ಸೀಮಾ ಆರ್. ಕಾಮತ್ ಅವರು ತಿಳಿಸಿದ್ದಾರೆ.ಸ್ವರಾಗ ಪ್ರಕಾಶನ ಸಂಸ್ಥೆ ಈ ಪುಸ್ತಕವನ್ನು ಹೊರತಂದಿದೆ.
ಅ.29ರಂದು ಮತ್ತೆ ಹುಟ್ಟುವನು ನೇಸರ ಕೃತಿ ಬಿಡುಗಡೆ
























