ನವರಾತ್ರಿಯ ಆರನೇ ದಿನದ ಪೂಜೆ ಕಾತ್ಯಾಯನಿಗೆ

ನವರಾತ್ರಿ ಆರನೇ ದಿನ ದೇವಿಯ ಅವತಾರ ಕಾತ್ಯಾಯನಿ ಎಂದು ಪ್ರಸಿದ್ಧವಾಗಿದೆ. ಇದು ದೇವಿಯ ಶಕ್ತಿಶಾಲಿಯಾದ ರೂಪ. ಈ ಅವತಾರದಲ್ಲಿ ಮಹಿಷಾಸುರನನ್ನು ದೇವಿ ಸಂಹಾರ ಮಾಡುತ್ತಾಳೆ. ಆಕೆಯ ಕೈಯಲ್ಲಿ ಖಡ್ಗ ,ತಾವರೆ, ಅಭಯ ಮುದ್ರೆ ಮತ್ತು ವರ ಮುದ್ರೆಗಳಿದ್ದು ಆಕೆ ಚತುರ್ಭುಜೆಯಾಗಿದ್ದಾಳೆ. ಕಾತ್ಯಾ ಎಂಬ ಋಷಿಯಿಂದ ಅವಳು ಘೋಷಿಸಲ್ಪಟ್ಟ ಕಾರಣ ಆಕೆಗೆ ಕಾತ್ಯಾಯಿನಿ ಎಂಬ ಹೆಸರು ಬಂದಿದೆ. ಅವಳು ವೈಭವದ ಸಿಂಹದ ಮೇಲೆ ಕುಳಿತವಳು. ವಿವಾಹಯೋಗ್ಯ ಕನ್ಯೆಯರಿಗೆ ಆಕೆಯ ಪೂಜೆ ಮಾಡುವುದರಿಂದ ಒಳ್ಳೆಯ ವರ ಸಿಗುತ್ತಾನೆ ಎಂಬ ನಂಬಿಕೆ ಕೂಡ ಇದೆ. ಆಕೆ ತಿಳಿ ಗುಲಾಬಿ ಬಣ್ಣದ ವಸ್ತ್ರಧಾರಿಣಿ. ಜೇನು ತುಪ್ಪ, ಬೆಲ್ಲ ಮತ್ತು ಕಡಲೆ ಆಕೆಗೆ ಇಷ್ಟವಾದ ಆಹಾರ ವಸ್ತುಗಳು.  































































error: Content is protected !!
Scroll to Top