ಕೊರೊನ ನಿಯಂತ್ರಣ ಸ್ಕೀಂ ಜಾರಿಗೆ ತನ್ನಿ

ಕಳೆದ ಒಂದು ವಾರದಿಂದ ಕೊರೊನ ದೇಶದಾದ್ಯಂತ ಇಳಿಮುಖವಾಗುತ್ತಿದೆ.ಕನಾ೯ಟಕದಲ್ಲಿಯೂ,ಹೊಸ ಪ್ರಕರಣಗಳು ಇಳಿಮುಖವಾಗುತ್ತಿರುವುದರ ಸುಳಿವು ಸಿಕ್ಕಿದೆ. ಆದರೆ ಮುಂದಿನ ಮೂರು ತಿಂಗಳು ಎಚ್ಚರದಿಂದಿರುವಂತೆ ಆರೋಗ್ಯ ಸಚಿವ ಡಾ! ಸುಧಾಕರ್ ಸಾವ೯ಜನಿಕರಿಗೆ ಸಂದೇಶ ನೀಡಿದ್ದಾರೆ.ಆರೋಗ್ಯ ಸಚಿವರ ಈ ಎಚ್ಚರಿಕೆಯನ್ನು ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.ಏಕೆಂದರೆ ಸದ್ಯಕ್ಕೆ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿದ್ದರೂ ಚಳಿಗಾಲದಲ್ಲಿ ಮತ್ತೆ ಹೆಚ್ಚುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿರುವುದನ್ನು ಮರೆಯಬಾರದು.  

ಗುಂಪಿನಲ್ಲಿ ಮಾಸ್ಕ್ ಧರಿ‌ಸುವ ಹಾಗೂ  ಅಂತರ  ಕಾಯ್ದುಕೊಳ್ಳುವ ಪ್ರವೃತ್ತಿಯನ್ನು ಜೀವನ ಶೈಲಿಯ ಭಾಗವಾಗಿ ಪರಿಗ್ರಹಿಸಲು ನೀಡಿದ ಕರೆ ಇದು ಎಂದರೆ ತಪ್ಪಾಗಲಾರದು.

ಮುಂದಿನ ದಿನಗಳಲ್ಲಿ ಕೊರೊನ ಗಣನೀಯವಾಗಿ ಇಳಿಕೆಯಾದರೂ ಆರೋಗ್ಯ ಇಲಾಖೆಯಲ್ಲಿ “ಕೊರೊನ ನಿಯಂತ್ರಣ ಸ್ಕೀಂ” ಅಳವಡಿಸಲು ಸರಕಾರ ಚಿಂತನೆ ನಡೆಸಬೇಕಾದ ಅಗತ್ಯ ಇದೆ.

ಈ ಸ್ಕೀಂ ಇಲಾಖೆಯ ಇತರ ಯೋಜನೆಗಳಿಗೆ ಸಮಾನಂತರವಾಗಿ(vertical) ಒಂದೆರಡು ವಷ೯ಗಳ ಕಾಲ ಕಾಯಾ೯ಚರಿಸುವಂತೆ ರೂಪಿಸಬೇಕು.ಪ್ರತಿ ತಾಲೂಕು  ಮಟ್ಟದಲ್ಲಿ ಘಟಕವಿದ್ದು ಅಗತ್ಯ ಸಂಖ್ಯೆಯ ವೈದ್ಯರು ಮತ್ತು ವೈದ್ಯೇತರ ಸಿಬಂದಿ ಸೇವೆ ಲಭ್ಯವಿರಬೇಕು.ಹಾಗೆ ತಾಲೂಕು ಆಸ್ಪತ್ರೆಗಳಲ್ಲಿ ಹಾಸಿಗೆ ಮೀಸಲಿಡಬೇಕು.ವೈದ್ಯರು ಮತ್ತು ವೈದ್ಯೇತರ ಸಿಬಂದಿ ಸೇವೆ ಹಾಲಿ  ಆರೋಗ್ಯ ಇಲಾಖೆಯಿಂದ ಎರವಲು ಸೇವೆಯ ಆಧಾರದಲ್ಲಿ ನೇಮಿಸುವುದರಿಂದ ಅನುಭವಿಗಳ ಸೇವೆ ಹೊಸ ಯೋಜನೆಗೆ ದೊರಕುತ್ತದೆ.ಸದ್ಯೋಭವಿಶ್ಯದಲ್ಲಿ ಲಸಿಕೆ ಸಿಗುವುದಾದಲ್ಲಿ ಈ ಯೋಜನೆ ಹೆಚ್ಚು ಉಪಯುಕ್ತವಾದೀತು.

ಇದೇ ವೇಳೆ ಆರೋಗ್ಯ ಹಾಗೂ ವೈದ್ಯಕೀಯ ಕ್ಷೇತ್ರದ ಎಲ್ಲ ವಿಭಾಗದ ಖಾಲಿ ಹುದ್ದೆಗಳನ್ನು ದಾಖಲೆ ಅವಧಿಯೊಳಗೆ ಭತಿ೯ ಮಾಡಲು ಸರಕಾರವನ್ನು ಸಾವ೯ಜನಿಕರು ಮತ್ತು ಮುಖ್ಯವಾಗಿ ಮಾಧ್ಯಮಗಳು ಒತ್ತಾಯಿಸುವ ಕೆಲಸ ಮಾಡಬೇಕಾದುದು ಅತಿ ಅಗತ್ಯ.

ಬೇಳೂರು ರಾಘವ ಶೆಟ್ಟಿ















































































































































error: Content is protected !!
Scroll to Top