ಐಪಿಲ್ ಪಂದ್ಯಗಳಲ್ಲಿ 37 ಮ್ಯಾಚ್ ಮುಗಿದಿದ್ದು ಅರ್ಧಕ್ಕಿಂತ ಹೆಚ್ಚು ಹಾದಿ ಮುಗಿಸಿ ಆಗಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ 9 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು ಡೆಲ್ಲಿ ಕ್ಯಾಪಿಟಲ್ ತಂಡ 14 ಪಾಯಿಂಟ್ಸ್ ಪಡೆದು ಅಗ್ರಸ್ಥಾನದಲ್ಲಿ ಇದೆ. ಮುಂಬೈ ಇಂಡಿಯನ್ಸ್ ಅಷ್ಟೇ ಪಂದ್ಯಗಳಲ್ಲಿ ಆರು ಗೆದ್ದು 12 ಅಂಕಗಳ ಜೊತೆಗೆ ಎರಡನೇ ಸ್ಥಾನದಲ್ಲಿ ಇದೆ. RCB ಅಷ್ಟೇ ಅಂಕ ಪಡೆದು ಮೂರನೇ ಸ್ಥಾನದಲ್ಲಿ ಇದೆ. ಕೋಲ್ಕತ್ತಾ ನೈಟ್ ರೈಡರ್ಸ್ ಐದು ಪಂದ್ಯ ಗೆದ್ದು 10 ಅಂಕ ಪಡೆದು ನಾಲ್ಕನೇ ಸ್ಥಾನದಲ್ಲಿ ಇದೆ. ಉಳಿದ ತಂಡಗಳು ಪ್ಲೇ ಆಫ್ ಹಂತಕ್ಕೆ ಏರಲು ಪ್ರಯತ್ನ ಮಾಡುತ್ತಲೇ ಇವೆ. ನಿನ್ನೆ ನಡೆದ ಎರಡೂ ಪಂದ್ಯಗಳು ಕೂಡ ಸೂಪರ್ ಓವರ್ ತನಕ ಹೋಗಿ ಕುತೂಹಲ ಮೂಡಿಸಿವೆ. ಮುಂದಿನ ಪಂದ್ಯಗಳ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.
ಕೊರೊನಾ ಕಾಲದಲ್ಲಿ ಕ್ರಿಕೆಟ್ ಅಭಿಮಾನಿಗಳ ಮನ ತಣಿಸುತ್ತಿದೆ ಐಪಿಎಲ್

































































