ಬೆಂಗಳೂರು, ಅ. 18: ಕೊರೊನಾ ಸಾಂಕ್ರಾಮಿಕ ಸೋಂಕಿನ ಹಾವಳಿ ಇನ್ನೂ ಕಡಿಮೆಯಾಗದಿರುವ ಕಾರಣ 7ನೇ ತನಕ ಈ ವರ್ಷ ಶಾಲೆ ಆರಂಭಿಸುವುದು ಬೇಡ. ಇದರ ಬದಲಾಗಿ 2020-21ನೇ ಶೈಕ್ಷಣಿಕ ವರ್ಷವನ್ನು ಶೂನ್ಯ ವರ್ಷವೆಂದು ಘೋಷಿಸಬೇಕೆಂದು ಎಂಎಲ್‌ಸಿ ಬಸವರಾಜ ಹೊರಟ್ಟಿಯವರು ಸರಕಾರಕ್ಕೆ ಸಲಹೆ ಮಾಡಿದ್ದಾರೆ.
8 ರಿಂದ 10ನೇ ತರಗತಿ ತನಕ ಬ್ಯಾಚ್ ನಲ್ಲಿ ತರಗತಿಗಳನ್ನು ನಡೆಸಬಹುದು. ಪಿಯುಸಿ ಮತ್ತ ಪದವಿ ಕಾಲೇಜು ಮಕ್ಕಳು ದೊಡ್ಡವರಾಗಿರುವುದರಿಂದ ಅವರಿಗೆ ಪರಿಸ್ಥಿಯ ಅರಿವಿರುತ್ತದೆ. ಹೀಗಾಗಿ ಕಾಲೇಜುಗಳನ್ನು ಪ್ರಾರಂಭಿಸಬಹುದು ಎಂದು ಹೊರಟ್ಟಿಯವರು ಹೇಳಿದ್ದಾರೆ.
ವಿದ್ಯಾಗಮನ ಕಾರ್ಯಕ್ರಮವನ್ನು ಟೀಕಿಸಿದ ಹೊರಟ್ಟಿ ಸರಕಾರ 45 ಲಕ್ಷ ಮಕ್ಕಳಿಗೆ ಇದರಿಂದ ಪ್ರಯೋಜನವಾಗಿದೆ ಎಂದು ಸರಕಾರ ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಶೇ. 5 ಮಕ್ಕಳಿಗೂ ಪ್ರಯೋಜನವಾಗಿಲ್ಲ ಎಂದು ಎಂದಿದ್ದಾರೆ.












