ರೋಟರಿ ಆನ್ಸ್‌ ಕ್ಲಬ್‌ : ನವರಾತ್ರಿ ಭಜನಾಮೃತ

ಕಾರ್ಕಳ, ಅ. 17: ನವರಾತ್ರಿಯನ್ನು ಕಾರ್ಕಳದಲ್ಲಿ ಜನರಿಗೆ ವಿಶೇಷವಾಗಿ ತಲುಪಿಸುವ ಪ್ರಯತ್ನದಲ್ಲಿ ರೋಟರಿ ಆನ್ಸ್ ಕ್ಲಬ್ ಕಾರ್ಕಳ ಒಂಬತ್ತು ದಿವಸ ಭಜನಾಮೃತ ಕಾರ್ಯಕ್ರಮವನ್ನು ಹೋಟೆಲ್ ಪ್ರಕಾಶ್ ನಲ್ಲಿ ಶುಕ್ರವಾರದಂದು ಹಮ್ಮಿಕೊಂಡಿತ್ತು.  ಈ ಕಾರ್ಯಕ್ರಮದಲ್ಲಿ ಕಾರ್ಕಳದ ಪ್ರಮುಖ ಹನ್ನೊಂದು ಮಹಿಳಾ ಭಜನಾ ಮಂಡಳಿಗಳು ಪಾಲ್ಗೊಂಡಿದ್ದು,  ಗುರುವಂದನ ಕಾರ್ಯಕ್ರಮವನ್ನು ಶ್ರೀ ದುರ್ಗಾ ಭಜನಾ ಮಂಡಳಿಯ ಅಧ್ಯಕ್ಷೆ ಜ್ಯೋತಿ ಪೈ ಅವರು ಖ್ಯಾತ ಭಜನೆ  ಶಿಕ್ಷಕರಾಗಿರುವ ಯೋಗೀಶ್ ಕಿಣಿ, ರಶ್ಮಿ ಕಿಣಿ ದಂಪತಿಗಳಿಗೆ ಹಾಗೂ ಖ್ಯಾತ ತಬಲಾ ವಾದಕ ಪ್ರದೀಪ್ ಉಪಾಧ್ಯಾಯ ಮತ್ತು ಭಜನಾ ಒಕ್ಕೂಟದ ಅಧ್ಯಕ್ಷ ಶ್ರೀಕಾಂತ್ ಪ್ರಭು ಅವರನ್ನು  ಸನ್ಮಾನಿಸುವ ಮೂಲಕ ನೆರವೇರಿಸಿದರು. ರೋಟರಿ ಆನ್ಸ್ ಕ್ಲಬ್ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್, ಕಾರ್ಯದರ್ಶಿ ಸುಮಾ ನಾಯಕ್ ಮತ್ತು ಶಶಿಕಲಾ ಗೌಡ, ಪುರಸಭಾ ಕೌನ್ಸಿಲರ್ ಭಾರತಿ ಅಮೀನ್ ಅವರು ಉಪಸ್ಥಿತರಿದ್ದರು.

































































error: Content is protected !!
Scroll to Top