ಕಾರ್ಕಳ ಅಂಚೆ ಕಚೇರಿಯಲ್ಲಿ ವಿಶ್ವ ಅಂಚೆ ದಿನಾಚರಣೆ

ಕಾರ್ಕಳ, ಅ.9 : ವಿಶ್ವ ಅಂಚೆ ದಿನಾಚರಣೆಯ  ಪ್ರಯುಕ್ತ  ಅ. 9ರಂದು ಕಾರ್ಕಳದ ಮುಖ್ಯ ಅಂಚೆ ಕಚೇರಿಯಲ್ಲಿ  ಅಂಚೆ ಇಲಾಖೆ ಮತ್ತು ರೋಟರಿ ಆನ್ಸ್ ಕ್ಲಬ್ ಮತ್ತು   ರೋಟರಾಕ್ಟ್ ಕ್ಲಬ್ ಕಾರ್ಕಳ ಸಹಯೋಗದೊಂದಿಗೆ ಜನರಿಗೆ ಅಂಚೆ ಇಲಾಖೆಯ ಮಾಹಿತಿ ಹಾಗೂ ಅಂಚೆ ಇಲಾಖೆಯ ಸೌಲಭ್ಯಗಳ ಕುರಿತಾದ  ಕರಪತ್ರ  ಮತ್ತು ವಿಡಿಯೋವನ್ನು ಬಿಡುಗಡೆ ಮಾಡಲಾಯಿತು.

ಅಧ್ಯಕ್ಷತೆ ವಹಿಸಿದ್ದ  ಸಹಾಯಕ ಅಧೀಕ್ಷಕ ಕಾರ್ಕಳ ಉಪವಿಭಾಗ ಚಂದ್ರ ನಾಯಕ್ ಅವರು ಇಲಾಖೆಯಿಂದ ಜಾರಿಗೆ ಬಂದ ಹೊಸ ಹೊಸ ಸೌಲಭ್ಯಗಳ ಮಾಹಿತಿಯನ್ನು ನೀಡಿದರು. ರೋಟರಿ ಆನ್ಸ್ ಕ್ಲಬ್ಬಿನ ಅಧ್ಯಕ್ಷೆ ರಮಿತಾ ಶೈಲೆಂದ್ರ ರಾವ್ ಕಾರ್ಯಕ್ರಮದ ಬಗ್ಗೆ ಮಾಹಿತಿಯಿತ್ತರು. ಕಾರ್ಕಳದ ಪೋಸ್ಟ್ ಮಾಸ್ಟರ್ ರಮೇಶ್, ಪ್ರಶಾಂತ್ ಆಚಾರ್ಯ ಹಾಗೂ ರೋಟರಾಕ್ಟ್ ಕ್ಲಬ್ ಕಾರ್ಯದರ್ಶಿ ಸಮೀರ್ ಅವರು ಉಪಸ್ಥಿತರಿದ್ದರು  ಸ್ವಾಗತ ಹಾಗೂ ನಿರೂಪಣೆಯನ್ನು ಮಾರ್ಕೆಟಿಂಗ್ ಕಾರ್ಯನಿರ್ವಾಹಕ  ಗುರುಪ್ರಸಾದ್ ಕೆ.ಎಸ್. ಮಾಡಿದರು.ಆನ್ಸ್ ಕ್ಲಬ್ಬಿನ ಕಾರ್ಯದರ್ಶಿ ಸುಮಾ ನಾಯಕ್ ವಂದಿಸಿದರು. ಇಲಾಖೆಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.















































































































































error: Content is protected !!
Scroll to Top