ಮುಂಬಯಿ, ಸೆ. 26 : ಬಾಲಿವುಡ್ ತಾರೆಯರ ಡ್ರಗ್ ನಂಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೊ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾದ ನಟಿ ದೀಪಿಕಾ ಪಡುಕೋಣೆ ತಾನು ವಾಟ್ಸಪ್ ಗ್ರೂಪಿನಲ್ಲಿ ಡ್ರಗ್ ಕುರಿತು ಮೆನೇಜರ್ ಕರಿಷ್ಮಾ ಪ್ರಕಾಶ್ ಜೊತೆಗೆ ಚಾಟಿಂಗ್ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ.
ನಿನ್ನೆ ಕರಿಷ್ಮಾ ಪ್ರಕಾಶ್ ಅವರನ್ನು ಪ್ರಶ್ನಿಸಲಾಗಿತ್ತು. ಇಂದು ಇಬ್ಬರನ್ನು ಮುಖಾಮುಖಿಯಾಗಿಸಿ ಪ್ರಶ್ನಿಸಿ ಎನ್‌ಸಿಬಿ ಅಧಿಕಾರಿಗಳು ಹಲವು ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನೋರ್ವ ನಟಿ ಸಾರಾ ಅಲಿಖಾನ್ ಅವರನ್ನೂ ಇಂದು ಎನ್‌ಸಿಬಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಇದಕ್ಕೂ ಮೊದಲು ಶ್ರದ್ಧಾ ಕಪೂರ್ ವಿಚಾರಣೆ ಎದುರಿಸಿದ್ದಾರೆ.

ದೀಪಿಕಾ ಪಡುಕೋಣೆ ಬೆಳಗ್ಗೆ ಎನ್‌ಸಿಬಿ ಎದುರು ಬಂದು ಅಪರಾಹ್ನದ ತನಕ ವಿಚಾರಣೆ ಎದುರಿಸಿದ್ದಾರೆ.































