ಯಾವುದೋ ಒಂದು ಕ್ಷಣದಲ್ಲಿ ಹೇಮಾಮಾಲಿನಿಗೆ ವಿವಾಹಿತ ಧರ್ಮೇಂದ್ರ ಇಷ್ಟವಾಗತೊಡಗಿದರು. ಆದರೆ ಯಾಕೋ ಧರ್ಮೇಂದ್ರನ ಸಂಸಾರವನ್ನು ಹಾಳುಗೈಯ್ಯುವ ಕೆಲಸ ತನ್ನಿಂದಾಗಬಾರದು ಎಂಬ ಅಳುಕು ಕೂಡಾ ಆಕೆಯಲ್ಲಿತ್ತು. ವಿವಾಹಿತನಾಗಿರುವ ಹೊರತಾಗಿಯೂ ಇತರ ನಟಿಯರತ್ತ ದೃಷ್ಟಿ ಹಾಕಿ ಸೋತು ಹೋಗಿರುವ ಧರ್ಮೇಂದ್ರನಿಗೆ ಹೇಮಾ ಎಂದರೆ ಇಷ್ಟವಾಗತೊಡಗಿದ್ದರು.ಒಂದು ದಿನ ಸ್ವತಃ ಧರ್ಮೇಂದ್ರ ಹೇಮಾರ ಬಳಿ ನಾನು ನಿನ್ನನ್ನು ವಿವಾಹವಾಗಲು ಬಯಸಿದ್ದೇನೆ ಎಂದು ಹೇಳಿದಾಗ ಆಕೆಗೆ ಧರ್ಮೇಂದ್ರರನ್ನು ಕೈಬಿಡಲು ಇಷ್ಟವಾಗಲಿಲ್ಲ. ಕೂಡಲೇ ಒಪ್ಪಿಕೊಂಡರು. ಆದರೆ ಒಬ್ಬ ಹೆಂಡತಿ ಇರುವಾಗ ಮತ್ತೊಬ್ಬಳನ್ನು ಹೆಂಡತಿಯಾಗಿ ಸ್ವೀಕರಿಸಲು ಹಿಂದೂ ವಿವಾಹ ಪದ್ಧತಿಯಲ್ಲಿ ಸಾಧ್ಯವಿಲ್ಲ. ಆದ್ದರಿಂದ ಅವರು ಧರ್ಮ ಬದಲು ಮಾಡಿ ವಿವಾಹವಾಗಿ ಬಳಿಕ ಒಂದು ವರ್ಷದ ನಂತರ ಅಯ್ಯಂಗಾರ್ ಶೈಲಿಯಲ್ಲಿ ಮದುವೆಯಾದರು.ಆಗ ಸನ್ನಿ ದೇವಲ್ ಗೆ 14-15 ರ ಹರೆಯವಾಗಿತ್ತು.ಹೇಮಾ ಮಾಲಿನಿ ತನ್ನ ಆತ್ಮ ಚರಿತ್ರೆಯಲ್ಲಿ ಹೇಳಿರುವಂತೆ ಆಕೆಗೆ ಜಿತೇಂದ್ರ ಜತೆಗೂ ಪ್ರೇಮಾಂಕುರವಾಗಿತ್ತು. ಒಂದು ದಿನ ತಿರುಪತಿಗೆ ಹೋಗಿ ಅಲ್ಲಿ ವಿವಾಹವಾಗುವುದಾಗಿಯೂ ಇಬ್ಬರೂ ನಿರ್ಧರಿಸಿದ್ದರಂತೆ.ಆದರೆ ಧರ್ಮೇಂದ್ರರಿಂದಾಗಿ ಅದು ಸಾಧ್ಯವಾಗಲಿಲ್ಲ. ಸಂಜೀವ್ ಕುಮಾರ್ ಮೇಲೂ ತನಗೆ ಪ್ರೇಮ ಮೂಡಿತ್ತು ಎಂದು ಆಕೆ ತನ್ನ ಆತ್ಮ ಚರಿತ್ರೆಯಲ್ಲಿ ಬರೆದಿದ್ದಾರೆ.ಜಯಪ್ರದಾ, ಶ್ರೀದೇವಿ, ರೇಖಾರಂತಹ ನಟಿಯರ ಜತೆ ಜಿತೇಂದ್ರ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರಿಂದಲೋ ಏನೋ ಆ ನಟಿಯರ ಜತೆಗೂ ಇವರ ಹೆಸರನ್ನು ಥಳುಕು ಹಾಕಲಾಗಿತ್ತು.
ಏಳಿಂಜೆ ನಾಗೇಶ್ ಮುಂಬಯಿ- 98929 80750
































