ಕಾರ್ಕಳ, ಸೆ. 21: ಆರಕ್ಷಕ ಠಾಣೆ ಕಾರ್ಕಳ, ರೋಟರಿ ಆನ್ಸ್ ಕ್ಲಬ್ ಕಾರ್ಕಳ, ಯುವವಾಹಿನಿ ಕಾರ್ಕಳ ಘಟಕ, ರೋಟರಾಕ್ಟ್ ಕ್ಲಬ್ ಕಾರ್ಕಳ ಸಹಯೋಗದಲ್ಲಿ ವಿಶ್ವ ಹೃದಯ ದಿನದ ಪ್ರಯುಕ್ತ ಸೆ. 27ರಂದು ಸೈಕಲ್ ಜಾಥಾ ನಡೆಯಲಿದೆ. ಅಂದು ಬೆಳಗಿನ ಜಾವ 6.30ಕ್ಕೆ ನಗರದ ಆನೆಕೆರ ವೃತ್ತದಿಂದ ಸೈಕಲ್ ಜಾಥಾ ಹೊರಡಲಿದ್ದು, 8.30 ರ ವೇಳೆ ಬಂಡಿಮಠ ತಲುಪಲಿದೆ. ಹೃದಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದ್ದು, ಭಾಗವಹಿಸುವವರು ಬಿಳಿ ಬಣ್ಣದ ಟಿ ಶರ್ಟ್ ಧರಿಸುವಂತೆ ಸಂಘಟಕರು ಮನವಿ ಮಾಡಿಕೊಂಡಿದ್ದಾರೆ.
ಸೆ.27ರಂದು ವಿಶ್ವ ಹೃದಯ ದಿನದಂಗವಾಗಿ ಸೈಕಲ್ ಜಾಥಾ



















