ಕಾರ್ಕಳ, ಸೆ. 21: ಜೇಸಿಐ ಕಾರ್ಕಳ ಜೇಸಿ ದಿನೇಶ್ ಹೆಗ್ಡೆ ಸ್ಮರಣಾರ್ಥ ಕಾಬೆಟ್ಟುವಿನಲ್ಲಿ ನಿರ್ಮಿಸಿದ ಬಸ್ ತಂಗುದಾಣವನ್ನು ಜೇಸಿಐ ರಾಷ್ಟ್ರಾಧ್ಯಕ್ಷ ಜೇಸಿಂ ಸೆನ್ ಅನಿಷ್ ಸಿ. ಮ್ಯಾಥ್ಯೂ ಅವರು ಭಾನುವಾರ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಜೇಸಿಐ ವಲಯ ಅಧ್ಯಕ್ಷ ಜೇಸಿ ಕಾರ್ತಿಕೇಯ ಮಧ್ಯಸ್ಥ, ಜೇಸಿಐ ಕಾರ್ಕಳ ಅಧ್ಯಕ್ಷ ದಿವಾಕರ ಬಂಗೇರ, ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಜೇಸಿ ಚಿತ್ತರಂಜನ್ ಶೆಟ್ಟಿ, ಪೂರ್ವ ವಲಯ ಅಧ್ಯಕ್ಷ ಜಾನ್ ಆರ್. ಡಿʼಸಿಲ್ವಾ, ವಲಯ ಉಪಾಧ್ಯಕ್ಷ ಜೇಸಿ ಸಮದ್ ಖಾನ್, ಪೂರ್ವ ಅಧ್ಯಕ್ಷ ಪ್ರದೀಪ್ ನಾಯಕ್, ವೃಷಭ್ ರಾಜ್ ಕಡಂಬ, ಪದ್ಮಪ್ರಸಾದ್ ಜೈನ್, ರೋಶನ್ ಡಿಮೆಲ್ಲೊ, ಕಾರ್ಯಕ್ರಮ ಸಂಯೋಜಕ ಹರೀಶ್ಚಂದ್ರ ಕುಲಾಲ್, ಗಿರೀಶ್ ಕಿಣಿ, ನಿಕಟಪೂರ್ವ ಅಧ್ಯಕ್ಷ ದಿವ್ಯಾಸ್ಮಿತಾ ಭಟ್, ಕಾರ್ಯದರ್ಶಿ ದಿನೇಶ್ ನಾಯಕ್, ಜೇಸಿರೇಟ್ ಅಧ್ಯಕ್ಷೆ ಚಂದ್ರಿಕಾ ದಿವಾಕರ್, ರೇಖಾ ಡಿ. ಹೆಗ್ಡೆ ಉಪಸ್ಥಿತರಿದ್ದರು. ಜೇಸಿ ರಾಮಚಂದ್ರ ನೆಲ್ಲಿಕಾರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿತು.





















