ಸದನ ತೊರೆಯಲು ನಿರಾಕರಿಸಿದ ಅಮಾನತುಗೊಂಡ ಸದಸ್ಯರು : ಮತ್ತೆ ಗದ್ದಲ

ದಿಲ್ಲಿ, ಸೆ. 21 :  ಕೃಷಿ ಮಸೂದೆ ವಿರೋಧಿಸಿ  ರಾಜ್ಯಸಭೆಯಲ್ಲಿ ಭಾರಿ  ಗದ್ದಲಗಳು ಏರ್ಪಟ್ಟ ಒಂದು ದಿನದ ಬಳಿಕ, ರಾಜ್ಯಸಭಾ ಮುಖ್ಯಸ್ಥ ಎಂ. ವೆಂಕಯ್ಯ ನಾಯ್ಡು ಅವರು ಎಂಟು ಮಂದಿ ಸಂಸದರನ್ನು ಅಮಾನತು ಮಾಡಿದ್ದಾರೆ.ಆದರೆ ಆಮಾನತುಗೊಂಡೆ ಸದಸ್ಯರು ಸದನ ತೊರೆಯಲು ನಿರಾಕರಿಸಿದ ಪರಿಣಾಮವಾಗಿ ಸದನ ಇಂದು ಕೂಡ ಗದ್ದಲದ ಗೂಡಾಯಿತು.

ಟಿಎಂಸಿ ಪಕ್ಷದ ಡೆರೆಕ್ ಒಬ್ರಿಯಾನ್, ಆಮ್ ಆದ್ಮಿ ಪಕ್ಷದ ಸಂಜಯ್‌ ಸಿಂಗ್ ಸೇರಿದಂತೆ ಎಂಟು ಮಂದಿ ಸಂಸದರನ್ನು ಸದನದಲ್ಲಿ ತೋರಿದ ಅಶಿಸ್ತಿನ ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ. ಡೋಲಾ ಸೇನ್, ರಾಜೀವ್ ಸಾಟವ್, ಕೆ.ಕೆ. ರಾಗೇಶ್, ಸಯ್ಯದ್ ನಾಸಿರ್ ಹುಸೇನ್, ರಿಪುನ್ ಬೋರ, ಎಲಮರಮ್ ಕರೀಂ ಅಮಾನತುಗೊಂಡ ಇತರ ಸಂಸದರಾಗಿದ್ದಾರೆ.

ರಾಜ್ಯಸಭೆಯಲ್ಲಿ ನಿನ್ನೆ ನಡೆದ ಘಟನೆಗಳನ್ನು ವೆಂಕಯ್ಯ ನಾಯ್ಡು ಅವರು ‘ರಾಜ್ಯಸಭೆಗೆ ಕರಾಳ ದಿನ’ ಎಂದು ಬಣ್ಣಿಸಿದ್ದಾರೆ. ಈ ಸಂಸದರುಗಳು ರಾಜ್ಯಸಭಾ ಉಪಾಧ್ಯಕ್ಷರ ಮೈಕನ್ನು ಕಿತ್ತುಕೊಂಡಿದ್ದಾರೆ ಮತ್ತು ಅವರ ವಿರುದ್ಧ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ.“ಸಂಸದರು ನಿಯಮವನ್ನು ಉಲ್ಲಂಘಿಸಿದ್ದಾರೆ. ಇದು ದುರಾದೃಷ್ಟಕರ, ಸ್ವೀಕಾರಾರ್ಹವಲ್ಲ ಮತ್ತು ಇಂತಹ ಘಟನೆಗಳು ಸಂಸತ್ತಿನ ಘನತೆಯನ್ನು ಹಾಳುಮಾಡುತ್ತದೆ. ಒಂದು ವೇಳೆ ಮಾರ್ಷಲ್‌ಗಳನ್ನು ಕರೆಯದೆ ಇರುತ್ತಿದ್ದರೆ ಏನಾಗುತ್ತಿತ್ತೋ ಎಂಬುದು ನನಗೆ ಈಗಲೂ ಆತಂಕವನ್ನು ಉಂಟು ಮಾಡುತ್ತದೆ” ಇಂದು ನಾಯ್ಡು ಹೇಳಿದ್ದಾರೆ.



































































































error: Content is protected !!
Scroll to Top