ಅಜಬ್ ಫಿಲ್ಮಿ ದುನಿಯಾ ಕೀ ಗಜಬ್ ಕಹಾನಿ-ಪ್ರಾಣ್‌ ಹುಟ್ಟಿದ್ದು ಯಾವಾಗ?

ಹಿಂದಿ ಚಿತ್ರರಂಗದ ಖ್ಯಾತ ಖಳನಟ ಪ್ರಾಣ್ ಗೆ ತನ್ನ ಜನನ ದಿನಾಂಕ ಫೆಬ್ರವರಿ 1920 ಎಂಬುದಾಗಿ ಮಾತ್ರ ಗೊತ್ತು.ಡ್ರೈವಿಂಗ್ ಲೈಸೆನ್ಸ್ ಗಾಗಿ ಫೆಬ್ರವರಿ 22,1920 ಎಂದು ನಮೂದಿಸಿದ್ದರು.ನಂತರ ಅದು ಶಾಶ್ವತವಾಯಿತು.

ಒಮ್ಮೆ ಲಾಹೋರ್ ನಲ್ಲಿ ಸಿನಿಮಾವೊಂದರ ಚಿತ್ರೀಕರಣ ನಡೆಸುತ್ತಿದ್ದಾಗ ಅಲ್ಲಿನ ಮಾಧ್ಯಮಗಳು ಅವರ ಸಂದರ್ಶನ ನಡೆಸಿ ಪ್ರಕಟಿಸಿದವು.ಈ ಸಂದರ್ಶನವನ್ನು ಓದಿದ ಪ್ರಾಣ್ ಅವರ ಹುಟ್ಟೂರು ದೆಹಲಿಯ ಓರ್ವ ವ್ಯಕ್ತಿಗೆ ಅದರಲ್ಲಿ ಪ್ರಕಟವಾದ ಜನ್ಮ ದಿನಾಂಕ ತಪ್ಪು  ಎಂಬುದು ಗೊತ್ತಾಯಿತು.ತನ್ನ ನೆರೆಮನೆಯ ,ನನ್ನೆದುರೇ ಹುಟ್ಟಿದ ಮಗು ಈತ ಎಂಬುದು ಆ ವ್ಯಕ್ತಿಗೆ ಚೆನ್ನಾಗಿ ಗೊತ್ತು.ಅವರು ನಗರ ಪಾಲಿಕೆಯ ಸಿಬ್ಬಂದಿಯಾಗಿದ್ದರು‌. ನಗರಪಾಲಿಕೆಯಲ್ಲಿ ದಸ್ತಾವೇಜುಗಳನ್ನು ಹುಡುಕಿ ಪ್ರಾಣ್ ರ ಜನ್ಮ ದಿನಾಂಕ 22 ಅಲ್ಲ,12 ಫೆಬ್ರವರಿ1920 ಎಂಬುದನ್ನು ಪತ್ತೆ ಹಚ್ಚಿದರು.ಈ ವಿಚಾರವನ್ನು ದಾಖಲೆ ಸಹಿತ ಪ್ರಾಣ್ ಗೆ ಪತ್ರ ಬರೆದು ತಿಳಿಸಿದರು. ಪ್ರಾಣ್ ಗೆ ಬಹಳ ಖುಷಿಯಾಯಿತು.ಪತ್ರಕ್ಕೆ ಪ್ರತಿಯಾಗಿ ಧನ್ಯವಾದ ತಿಳಿಸಿ ಪತ್ರ ಬರೆದರು.

ಏಳಿಂಜೆ ನಾಗೇಶ್ -98929 80750



































































































error: Content is protected !!
Scroll to Top