ಭಿವಂಡಿ : ಕಟ್ಟಡ ಕುಸಿದು 10 ಸಾವು

ಥಾಣೆ, ಸೆ. 21 :ಥಾಣೆ ಜಿಲ್ಲೆಯ ಭಿವಂಡಿಯಲ್ಲಿ ಬಹುಮಹಡಿ ಕಟ್ಟಡವೊಂದು ಕುಸಿದು ಬಿದ್ದು ಕಟ್ಟಡೊಳಗಿದ್ದವರ ಪೈಕಿ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ.ಇನ್ನೂ ಸುಮಾರು 15  ಮಂದಿ ಅವಶೇಷಗಳಡಿ ಸಿಕ್ಕಿಬಿದ್ದಿದ್ದು ಸಾವಿನ ಸಂಖ್ಯೆ ಏರುವ ಭೀತಿಯಿದೆ. 30 ಮಂದಿಯನ್ನು ಅವಶೇಷದಡಿಯಿಂದ ಪಾರು ಮಾಡಲಾಗಿದೆ.

ಭಿವಂಡಿಯ ಪಟೇಲ್ ಕಾಂಪೌಂಡ್ನೊಳಗಿರುವ ವಸತಿ ಕಟ್ಟಡ ನಸುಕಿನ 3.45ರ ಹೊತ್ತಿಗೆ  ಕುಸಿದು ಬಿತ್ತು.  

ಈ ಬಗ್ಗೆ ಮಾಹಿತಿ ನೀಡಿರುವ ಥಾಣೆ ಮುನ್ಸಿಪಲ್ ಕಾರ್ಪೋರೇಷನ್ ವಕ್ತಾರರು ರಕ್ಷಣಾ ಕಾರ್ಯಾಚರಣೆ ಸಾಗಿದ್ದು, ಈ ವರೆಗೂ 10 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಅಂತೆಯೇ ಅವಶೇಷಗಳಡಿಯಲ್ಲಿ ಸಿಲುಕಿದ್ದ ಹಲವು ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 20 ಮಂದಿ ಸಿಲುಕಿರುವ ಸಾಧ್ಯತೆ ಇದ್ದು ಕಾರ್ಯಾಚರಣೆ ಸಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಟ್ಟಡ ಶಿಥಿಲಗೊಂಡಿದ್ದು, ನಗರಪಾಲಿಕೆ ಅದರಲ್ಲಿದ್ದ ನಿವಾಸಿಗಳಿಗೆ ತೆರವುಗೊಳಿಸಲು ನೋಟಿಸ್‌ ನೀಡಿತ್ತು. ಆದರೆ ಅವರು ಅದನ್ನು ಕಡೆಗಣಿಸಿದ್ದರು.

ಮೃತರಲ್ಲಿ ನಾಲ್ಕು ಹಸುಳೆಗಳು ಸೇರಿವೆ.  10ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು, ಅವರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 40 ವರ್ಷ ಹಳೆಯ ಕಟ್ಟಡದಲ್ಲಿ 20 ಕುಟುಂಬಗಳು ವಾಸವಾಗಿದ್ದವು. ಎಲ್ಲರೂ ನಿದ್ರೆಯಲ್ಲಿದ್ದ ಹೊತ್ತಿನಲ್ಲಿ ದುರಂತ ಸಂಭವಿಸಿದ ಕಾರಣ ಸಾವುನೋವು ಹೆಚ್ಚವಾಗಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ.



































































































error: Content is protected !!
Scroll to Top