ಕಾರ್ಕಳ : ರವಿವಾರ ಸುರಿದ ಧಾರಾಕಾರ ಮಳೆಗೆ ಕಾರ್ಕಳ ತಾಲೂಕು ಈದು ಗ್ರಾಮದ ಪಾಲಡ್ಕ ಎಂಬಲ್ಲಿಯ ಹೊಳೆಯಲ್ಲಿ ಕಾಡೆಮ್ಮೆಯೊಂದು ತೇಲಿಬಂತು. ಕಾಲು ಜಾರಿ ಕಾಡೆಮ್ಮೆ ನೀರುಪಾಲಾಗಿರಬಹುದೆಂದು ಅರಣ್ಯ ಇಲಾಖೆಯವರು ತಿಳಿಸಿದ್ದು, ಸೆ. 21ರಂದು ಕಾರ್ಕಳ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಾಸುದೇವ ಪೈ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಹೊಸ್ಮಾರು ನಾಟ ಸಂಗ್ರಹಾಲಯದಲ್ಲಿ (ಟಿಂಬರ್ ಡಿಪೊ)ದಲ್ಲಿ ಕಾಡೆಮ್ಮೆಯನ್ನು ದಹನ ಮಾಡಲಾಯಿತು. ಎಸಿಎಫ್ ಪ್ರಶಾಂತ್ ಪಿ.ಕೆ.ಎಂ., ಡಿಆರ್‌ಎಫ್‌ಒ ಪ್ರಕಾಶ್ ಶೆಟ್ಟಿ, ಆರ್‌ಎಫ್‌ಒ ಪ್ರಕಾಶ್ ಪೂಜಾರಿ, ಅರಣ್ಯ ಇಲಾಖೆ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈದು : ವರುಣನ ಆರ್ಭಟಕ್ಕೆ ಕಾಡೆಮ್ಮೆ ನೀರುಪಾಲು































