ಕಾರ್ಕಳ : ಮಿಯಾರು ಗ್ರಾಮದ ರಾಮೇರಗುತ್ತು ರಸ್ತೆ ನಿವಾಸಿ ರಾಘು ಪೂಜಾರಿ (56) ಸೆ.10ರಂದು ತಮ್ಮ ವಾಸ್ತವ್ಯದ ಮನೆಯ ಮೇಲ್ಚಾವಣಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 20 ವರ್ಷಗಳಿಂದ ತನ್ನ ಎರಡೂ ಕಾಲುಗಳ ಗಂಟು ನೋವಿನಿಂದ ಬಳಲುತ್ತಿದ್ದ ಇವರು ಸರಿಯಾಗಿ ನಡೆದಾಡಲು ಆಗದಂತ ಪರಿಸ್ಥಿತಿಯಲ್ಲಿದ್ದ ಪರಿಣಾಮ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಮಿಯ್ಯಾರು : ವ್ಯಕ್ತಿ ಆತ್ಮಹತ್ಯೆ



















