ದಿಲ್ಲಿ, ಸೆ. 10: ಹಿರಿಯ ನಟ, ಬಿಜೆಪಿಯ ಮಾಜಿ ಸಂಸದ ಪರೇಶ್ ರಾವಲ್ ಅವರು ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ)ಯ ಅಧ್ಯಕ್ಷರಾಗಿ ಆಯ್ಕೆ ಅಗಿದ್ದಾರೆ. ರಾಷ್ಡ್ರಪತಿ ರಾಮನಾಥ್ ಕೋವಿಂದ್ ಅವರು ಈ ನೇಮಕಾತಿ ಮಾಡಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಟ್ವೀಟರ್ ಮೂಲಕ ಪರೇಶ್ ರಾವಲ್ ನೇಮಕಾತಿ ವಿಚಾರವನ್ನು ಹಂಚಿಕೊಂಡಿದ್ದಾರೆ.
ಪ್ರತಿಭಾವಂತ ನಟರಾಗಿರುವ ಪರೇಶ್ ರಾವಲ್, ಖಳ, ಹಾಸ್ಯ ಮತ್ತು ಚಾರಿತ್ರಿಕ ಪಾತ್ರಗಳಿಗೆ ಜೀವ ತುಂಬಿ ಸೈ ಎನಿಸಿಸಕೊಂಡಿದ್ದಾರೆ. ಮೂರು ದಶಕಕ್ಕೂ ಮಿಕ್ಕಿದ ಸಿನಿ ಬದುಕಿನಲ್ಲಿ ಅವರು ವೈವಿಧ್ಯಮಯ ಪಾತ್ರಗಳನ್ನು ಮಾಡಿದ್ದಾರೆ.
ರಂಗಭೂಮಿಯ ಮೇಲೆ ಪರೇಶ್ ಅವರು ವಿಶೇಷವಾದ ಅಭಿಮಾನ ಹೊಂದಿದ್ದು, ಈ ಹಿಂದೆ ಖಾಸಗಿ ಮಾಧ್ಯಮವೊಂದರ ಸಂದರ್ಶನದ ಸಂದರ್ಭದಲ್ಲಿಯೂ ರಂಗಭೂಮಿ ಮೇಲಿನ ತಮ್ಮ ಕಾಳಜಿಯನ್ನು ಅಭಿವ್ಯಕ್ತಪಡಿಸಿದ್ದರು.






















