ಜೇಸಿಐ ಕಾರ್ಕಳ: ಸೆ.9 ರಿಂದ ಜೇಸಿ ಸಪ್ತಾಹ 2020

ಕಾರ್ಕಳ, ಸೆ.8: ಜೇಸಿಐ ಕಾರ್ಕಳ, ಜೇಸಿರೇಟ್‌ ವಿಭಾಗ ಮತ್ತು ಜೂನಿಯರ್‌ ಜೇಸಿ ವಿಭಾಗ ಇದರ ವತಿಯಿಂದ ಜೇಸಿ ಸಪ್ತಾಹ – 2020 ಸೆ.9ರಿಂದ 15ರ ತನಕ ನಡೆಯಲಿದೆ.

ಈ ಕಾರ್ಯಕ್ರಮದಂಗವಾಗಿ ಕೊವಿಡ್‌ -19 ಥೀಮ್‌ ಮೇಲೆ ದೃಶ್ಯ-ಶ್ರಾವ್ಯ ಸ್ಪರ್ಧೆ, ಸಾರ್ವಜನಿಕರಿಗೆ ವಿವಿಧೆಡೆ ಮಾಸ್ಕ್‌ ವಿತರಣೆ,ಸ್ಯಾನಿಟೈಸರ್‌ ವಿತರಣೆ, ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ, ಜೇಸಿ ಸದಸ್ಯರಿಗೆ ಆಟೋಟ ಸ್ಪರ್ಧೆಗಳು (ಸ್ಥಳೀಯ ಕ್ರೀಡೆಗಳು) , ಮೆಹಂದಿ ಫೋಟೊ ಸ್ಪರ್ಧೆ (ಆನ್‌ಲೈನ್)‌ ಬೃಹತ್‌ ರಕ್ತದಾನ ಶಿಬಿರ, ಗಿಡ ವಿತರಣೆ, ಜೇಸಿ ಸದಸ್ಯರಿಗೆ ಜೀವನ ಶೈಲಿ ರೋಗಗಳ ತಪಾಸಣಾ ಶಿಬಿರ ಈ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸೆ.9ರಂದು ಮಾಸ್ಕ್‌ ವಿತರಿಸುವ ಮೂಲಕ ಜೇಸಿ ಸಪ್ತಾಹ-2020 ಕಾರ್ಯಕ್ರಮಕ್ಕೆ  ಚಾಲನೆ ನೀಡಲಾಗುವುದು. ಅನಂತರ ವಾರವಿಡೀ ವಿವಿಧ  ಕಾರ್ಯಕ್ರಮಗಳು ನಡೆಯಲಿವೆ ಎಂದು ಕಾರ್ಕಳ ಜೇಸಿಂ ಅಧ್ಯಕ್ಷ ದಿವಾಕರ ಬಂಗೇರ ಮತ್ತು ಸಪ್ತಾಹ ನಿರ್ದೇಶಕ ಸಂತೋಷ್‌ ಕುಮಾರ್‌ ರೆಂಜಾಳ ಮತ್ತು ಕಾರ್ಯದರ್ಶಿ ದಿನೇಶ್‌ ನಾಯಕ್‌ ಅವರ ಪ್ರಕಟನೆ ತಿಳಿಸಿದೆ.







































error: Content is protected !!
Scroll to Top