ಕಾರ್ಕಳ, ಸೆ. 7: ಜೇಸಿಐ ಕಾರ್ಕಳ ಇದರ ಕೋಶಾಧಿಕಾರಿ ಜೇಸಿ ನವೀನ್ ಲೋಬೊ ಅವರಿಗೆ ಬಂಟ್ವಾಳದ ಬಂಟರ ಭವನದಲ್ಲಿ ಸೆ.6ರಂದು ನಡೆದ ವಲಯ 15ರ ವ್ಯವಹಾರ ಸಮ್ಮೇಳನದಲ್ಲಿ ಸಾಧನಾ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕುಕ್ಕುಂದೂರಿನ ಯುವ ಉದ್ಯಮಿಯಾಗಿರುವ ನವೀನ್ ಲೋಬೊ ಅವರು ಉದ್ಯಮದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.



















