ಐಎಂಎ ರಾಜ್ಯ| ಘಟಕದ ಅಧ್ಯಕ್ಷರಾಗಿ ಡಾ. ಸುರೇಶ್‌ ಕುಡ್ವ ಆಯ್ಕೆ

0

ಕಾರ್ಕಳ : ಭಾರತೀಯ ವೈದ್ಯಕೀಯ ಸಂಘ (ಐಎಂಎ) ರಾಜ್ಯ ಘಟಕದ ಅಧ್ಯಕ್ಷರಾಗಿ ಕಾರ್ಕಳ ಮಲ್ಯಾ ಆಸ್ಪತ್ರೆಯ ಎಂ.ಡಿ. ಡಾ. ಸುರೇಶ್‌ ಕುಡ್ವ ಅವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. 2021-22ರ ಅವಧಿಗೆ ನೂತನ ಪದಾಧಿಕಾರಿಗಳನ್ನುಆ. 16ರಂದು ಬೆಂಗಳೂರಿನ ಐಎಂಎ ಸೌಧದಲ್ಲಿ ಆಯ್ಕೆ ಮಾಡಲಾಗಿದೆ.

1967ರಲ್ಲಿ ಡಾ. ಟಿ.ಎಂ.ಎ. ಪೈ ಅವರು ಈ ಹುದ್ದೆ ಅಲಂಕರಿಸಿದ್ದು ತದನಂತರ ಇದೀಗ ಡಾ. ಕುಡ್ವ ಅವರು ಆಯ್ಕೆಯಾಗುವ ಮೂಲಕ ಅವಿಭಜಿತ ದ.ಕ.ದಿಂದ ಎರಡನೆಯವರಾಗಿ ಆಯ್ಕೆಯಾದ ಹೆಗ್ಗಳಿಕೆ ಪಾತ್ರರಾಗಿರುತ್ತಾರೆ. ಕಾರ್ಕಳ ಭಾರತೀಯ ವೈದ್ಯಕೀಯ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ, ಅನಂತರ 5 ಅವಧಿಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಡಾ. ಕುಡ್ವರು 2006-07ರಲ್ಲಿ ಕರ್ನಾಟಕ ರಾಜ್ಯ ಘಟಕದ ಹಿರಿಯ ಉಪಾಧ್ಯಕ್ಷರಾಗಿ, ನವದೆಹಲಿಯಲ್ಲಿರುವ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ, ಭಾರತೀಯ ಮಕ್ಕಳ ತಜ್ಞರ ಸಂಘದ ಉಡುಪಿ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.---
Previous articleಕಾಶ್ಮೀರದಲ್ಲಿ ಮುಂದುವರಿದ ಉಗ್ರ ಬೇಟೆ : ಲಷ್ಕರ್‌ ಕಮಾಂಡರ್‌ ಸಹಿತ ಮೂವರು ಬಲಿ
Next articleಒಂದಕ್ಕಿಂತ ಹೆಚ್ಚು ಪಾನ್‌  ಕಾರ್ಡ್‌ ಹೊಂದಿದ್ದೀರಾ? : ನಿಮ್ಮ ಮೇಲಿದೆ ಐಟಿ ಕಣ್ಣು

LEAVE A REPLY

Please enter your comment!
Please enter your name here