ಕಾಶ್ಮೀರದಲ್ಲಿ ಮುಂದುವರಿದ ಉಗ್ರ ಬೇಟೆ : ಲಷ್ಕರ್‌ ಕಮಾಂಡರ್‌ ಸಹಿತ ಮೂವರು ಬಲಿ

0
ಸಾಂದರ್ಭಿಕ ಚಿತ್ರ

ಶ್ರೀನಗರ, ಆ. 20: ಕಾಶ್ಮೀರದಲ್ಲಿ ಉಗ್ರ ದಮನ ಕಾರ್ಯ ಮುಂದುವರಿದಿದ್ದು ಕಳೆದ 24 ತಾಸುಗಳ ಅವಧಿಯಲ್ಲಿ ನಡೆಸಿದ ನಾಲ್ಕು ಕಾರ್ಯಾಚರಣೆಗಳಲ್ಲಿ  ಮೂವರು ಭಯೋತ್ಪಾದಕರನ್ನು ಮಟ್ಟ ಹಾಕಲಾಗಿದೆ.  ನಾಲ್ವರು ನಡ್ರರನ್ನು ಬಂಧಿಸಿ ಅಪಾರ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕುಪ್ವಾರಾ ಜಿಲ್ಲೆಯ ಹಂಡ್ವಾರದಲ್ಲಿ ನಡೆದ ಎನ್ಕೌಂಟರ್‌ನಲ್ಲಿ  ಲಷ್ಕರ್-ಎ-ತೋಯ್ಬಾದ ಇಬ್ಬರು ವಭಯೋತ್ಪಾದಕರು ನಿನ್ನೆ ಸಂಜೆ ಬಲಿಯಾಡಿದ್ದಾರೆ. ಈ ಪೈಕಿ  ಒಬ್ಬ ಎಲ್‌ಇಟಿ ಕಮಾಂಡರ್ ನಾಸೀರುದ್ದೀನ್‌ ಲೋನ್ ಎಂದು ಪೊಲೀಸರು ಗುರುತಿಸಿದ್ದಾರೆ. ಈತ ಎಪ್ರಿಲ್ 18 ರಂದು ಸೊಪೋರ್‌ನಲ್ಲಿ ಮೂವರು ಸಿಆರ್‌ಪಿಎಫ್ ಯೋಧರನ್ನು ಮತ್ತು ಮೇ 4 ರಂದು ಹಂಡ್ವಾರದಲ್ಲಿ ಮೂರು ಸಿಆರ್‌ಪಿಎಫ್ ಯೋಧರನ್ನು ಬಲಿತೆಗೆದುಕೊಂಡ ಉಗ್ರ ದಾಳಿಯಲ್ಲಿ ಶಾಮೀಲಾಗಿದ್ದವ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೊಂದು ಎನ್ಕೌಂಟರ್‌ನಲ್ಲಿ ಇಬ್ಬರು  ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಮತ್ತು ಅವರ ಸಂಗಡಿಗರಿಗಾಗಿ  ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಹಂಡ್ವಾರದ  ಗಣಿಪೋರಾದಲ್ಲಿ ಈ ಎನ್ಕೌಂಟರ್ ನಡೆದಿದೆ.---
Previous articleಆಗಸ್ಟ್ 20-ಕೊಂಕಣಿ ಮಾನ್ಯತಾ ದಿವಸ್
Next articleಐಎಂಎ ರಾಜ್ಯ| ಘಟಕದ ಅಧ್ಯಕ್ಷರಾಗಿ ಡಾ. ಸುರೇಶ್‌ ಕುಡ್ವ ಆಯ್ಕೆ

LEAVE A REPLY

Please enter your comment!
Please enter your name here