ಅಮಿತ್‌ ಶಾ ಮತ್ತೆ ಅಸ್ವಸ್ಥ

ದಿಲ್ಲಿ, ಆ.18:  ಇತ್ತೀಚಿಗಷ್ಟೇ  ಕೊರೋನಾ ವೈರಸ್ ಸೋಂಕಿನಿಂದ ಗುಣಮುಖರಾಗಿ ಕಾರ್ಯ ನಿರತರಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ್ತೆ ಅಸ್ವಸ್ಥರಾಗಿದ್ದು, ಅವರನ್ನು  ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಳಲಿಕೆ ಮತ್ತು ಮೈ ಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಅಮಿತ್ ಶಾ ಇಲ್ಲಿನ ಏಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಲವು ದಿನಗಳ ಹಿಂದೆ ಅವರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿತ್ತು. ಸೋಂಕಿನ ಪರೀಕ್ಷಾ ವರದಿ ಪೊಸಿಟಿವ್ ಬಂದಿದ್ದರಿಂದ ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಗೆ ದಾಖಲಾಗಿ ವರದಿ ನಡಗೆಟಿವ್‌ ಬಂದ ಬಳಿಕ ಬಿಡುಗಡೆಯಾಗಿದ್ದರು.

ಸದ್ಯ ಅಮಿತ್​ ಶಾರ ಕೊವಿಡ್​ ಪರೀಕ್ಷೆ ನೆಗೆಟಿವ್​ ಬಂದಿದ್ದು ಸಚಿವರು ಆಸ್ಪತ್ರೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

 

a href="#" target="_blank">







































error: Content is protected !!
Scroll to Top