ಕಾರ್ಕಳ ದಾಖಲೆ ಮಳೆ : ಹಲವೆಡೆ ಹಾನಿ

ಕಾರ್ಕಳ : ಕಾರ್ಕಳ ತಾಲೂಕಿನಾದ್ಯಂತ ಶನಿವಾರ ಎಡೆಬಿಡದೇ ಮಳೆ ಸುರಿಯುತ್ತಿದ್ದು, ನದಿ, ಹೊಳೆ ತುಂಬಿ ಹರಿಯುತ್ತಿದೆ. ಶುಕ್ರವಾರ ಬೀಸಿದ ಗಾಳಿ ಮಳೆಗೆ ತಾಲೂಕಿನ ಹಲವೆಡೆ ಹಾನಿಯಾಗಿದೆ. ತಾಲೂಕಿನಾದ್ಯಂತ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದ್ದು,  ಕೆರ್ವಾಶೆಯಲ್ಲಿ ಅತಿ ಹೆಚ್ಚು ಅಂದರೆ 207.6 ಮಿ.ಮೀ. ಮಳೆಯಾಗಿದೆ.

ತುಂಬಿದ ಜಲಾಶಯ-ಜಲಪಾತ

ತಾಲೂಕಿನ ನದಿ, ಹೊಳೆ, ಜಲಪಾತಗಳು ತುಂಬಿ ಹರಿಯುತ್ತಿದೆ. ದುರ್ಗಾ ಗ್ರಾಮದ ಮುಂಡ್ಲಿ ಹಾಗೂ ಬಜಗೋಳಿ ಸಮೀಪದ ಕಡಾರಿ ಜಲಾಶಯ, ಎಣ್ಣೆಹೊಳೆ, ಸ್ವರ್ಣ ನದಿ, ಸೀತಾ ನದಿ, ದುರ್ಗಾ ಜಲಪಾತ, ನಿಟ್ಟೆಯ ಅಬ್ಬಿ ಹಾಗೂ ಹೆಬ್ರಿಯ ಕೂಡ್ಲು ಫಾಲ್ಸ್ ಗಳಲ್ಲಿ ನೀರು ಧುಮ್ಮಿಕ್ಕಿ ಹರಿಯುತ್ತಿದೆ.

ಮಳೆ ಹಾನಿ
ಶುಕ್ರವಾರ ರಾತ್ರಿ ಬೀಸಿದ ಗಾಳಿ ಮಳೆಗೆ ಹೆರ್ಮುಂಡೆ ಗ್ರಾಮದ ನಡುಮನೆ ಸುಂದರ ಹೆಗ್ಡೆ ಎಂಬವರ ಮನೆ ಸಂಪೂರ್ಣ ಹಾನಿಗೀಡಾಗಿದ್ದು, 30 ಸಾವಿರ ರೂ. ನಷ್ಟ ಸಂಭವಿಸಿದೆ.ಮಾಳ ಗ್ರಾಮದ ಕಡಂದಲಾಜೆ ನಾರಾಯಣ ಪೂಜಾರಿ ಎಂಬವರ ತೋಟಕ್ಕೆ ಗುಡ್ಡ ಕುಸಿದ ಪರಿಣಾಮ ಅಡಿಕೆ, ತೆಂಗು, ಬಾಳೆ ಕೃಷಿ ನಾಶವಾಗಿದ್ದು, 25 ಸಾವಿರ ರೂ. ನಷ್ಟ ಸಂಭವಿಸಿದೆ. ಹೆರ್ಮುಂಡೆ ಗ್ರಾಮದ ದೇವಣ್ಣ ನಾಯಕ್‌  ಎಂಬವರ 1 ಎಕ್ರೆ ಪ್ರದೇಶದ ಕೃಷಿ ಭೂಮಿ ಹಾನಿಗೀಡಾಗಿದೆ. ಅಡಿಕೆ, ಭತ್ತ, ಬಾಳೆಗಿಡ ನಾಶವಾಗಿದ್ದು, 50 ಸಾವಿರ ರೂ. ನಷ್ಟವುಂಟಾಗಿದೆ.

ಮಳೆ ಪ್ರಮಾಣ
ಕಾರ್ಕಳ 144. 2 ಮಳೆಯಾಗಿದೆ. ಇರ್ವತ್ತೂರು 122.8, ಅಜೆಕಾರು 203.2, ಬೆಳಿಂಜೆ 145.4, ಸಾಣೂರು 156.4, ಕೆದಿಂಜೆ 103.6, ಮುಳಿಕ್ಕಾರು, 205.6, ಕೆರ್ವಾಶೆ 207.6

ಹೆರ್ಮುಂಡೆ

ಹೆರ್ಮುಂಡೆ





























































































































































































































error: Content is protected !!
Scroll to Top