ಮುಂಬಯಿ, ಆ. 8 :ಪೆರ್ಣೆಂ ಸುರಂಗದೊಳಗೆ ಗೋಡೆ ಕುಸಿದ ಪರಿಣಾಮವಾಗಿ ಕೊಂಕಣ ರೈಲ್ವೇಯಲ್ಲಿ ರೈಲು ಚಂಚಾರ ಅಸ್ತವ್ಯಸ್ತಗೊಂಡಿದೆ. ರೈಲುಗಳನ್ನು ಮೀರಜ್-ಪುಣೆ ರೂಟ್ಗೆ ತಿರುಗಿಸಲಾಗಿದ್ದು, ಆ.20ರ ತನೆ ಇದೇ ರೂಟಿನಲ್ಲಿ ಸಂಚರಿಸಲಿದೆ ಎಂದು ಕೊಂಕ ರೈಲ್ವೇ ಮೂಲಗಳು ತಿಳಿಸಿವೆ.
ದುಃಸ್ವಪ್ನ ಸುರಂಗ
ಪೆರ್ಣಂ ಸುರಂಗ ಕೊಂಕಣ ರೈಲ್ವೇ ಪ್ರಯಾಣಿಕರ ಪಾಲಿಗೆ ಒಂದು ದುಃಸ್ವಪ್ನದಂತೆ ಕಾಡುತ್ತಿದೆ.ಪ್ರತಿ ಮಳೆಅಗಾಲದಲ್ಲಿ ಈಲ್ಲಿ ಭೂ ಕುಸಿತದಂಥ ಘಟನೆಗಳು ಸಂಭವಿಸಿಸ ರೈಲು ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಕೊಂಕಣ ರೈಲ್ವೇ ಮಾರ್ಗದಲ್ಲಿರುವ 91 ಸುರಂಗಗಳ ಪೈಕಿ ಅತಿ ಹೆಚ್ಚು ಸಮಸ್ಯೆ ಇರುವುದು ಈ ಸುರಂಗದಲ್ಲಿ. ಸುಮಾರು 1500 ಮೀಟರ್ ಉದ್ದವಿರುವ ಈ ಸುರಂಗ ನಿರ್ಮಾಣ ಕಾಲದಲ್ಲೂ ಬಹಳ ಅಡಚಣೆಗಳನ್ನು ತಂದೊಡ್ಡಿತ್ತು.