ದಿಲ್ಲಿ, ಆ. 6: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಿನ್ನವನ್ನು ಅಡವಿಟ್ಟು ಸಾಲ ಪಡೆಯುವವರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಗ್ರಾಹಕರು ಈಗ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಅಡವಿಡುವ ತಮ್ಮ ಚಿನ್ನಕ್ಕಾಗಿ ದೊಡ್ಡ ಮೊತ್ತದ ಸಾಲವನ್ನು ಪಡೆಯಬಹುದು.
ಈ ನಿಟ್ಟಿನಲ್ಲಿ ಆರ್‌ಬಿಐ ಪ್ರಮುಖ ನಿರ್ದೇಶನಗಳನ್ನು ನೀಡಿದೆ.ಕೊರೊನಾದ ಹಿನ್ನೆಲೆಯಲ್ಲಿ ಜನರು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರಣ ಈ ಸೌಲಭ್ಯವನ್ನು ಒದಗಿಸುತ್ತಿದ್ದೇವೆ ಎಂದು ಆರ್‌ಬಿಐ ಹೇಳಿದೆ.
ಪ್ರಸ್ತುತ ಚಿನ್ನದ ಮೌಲ್ಯದ ಶೇ. 75 ರವರೆಗೆ ಸಾಲ ನೀಡಲಾಗುತ್ತಿದೆ. ಅದಾಗ್ಯೂ, ಗ್ರಾಹಕರು ಈಗ ಶೇಕಡಾ 90 ರವರೆಗೆ ಸಾಲ ಪಡೆಯಬಹುದು. ಮುಂದಿನ ಮಾರ್ಚ್ ವೇಳೆಗೆ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಆರ್‌ಬಿಐ ತಿಳಿಸಿದೆ. ಆದರೆ ಶೇ.90 ಸಾಲವನ್ನು ತೆಗೆದುಕೊಂಡರೆ ಬಡ್ಡಿ ಕೂಡ ಹೆಚ್ಚಾಗುತ್ತದೆ.