ಇಂದು ರಕ್ಷಾ ಬಂಧನ

ಶ್ರಾವಣ ಮಾಸದ ಹುಣ್ಣಿಮೆ ಬಂದಿತೆಂದರೆ ಹಿಂದೂಗಳಿಗೆ ರಕ್ಷಾ ಬಂಧನದ ಹಬ್ಬ! ಅಂದು ಪ್ರತೀ ಓರ್ವ ಹೆಣ್ಣು ತನ್ನ ಅಣ್ಣನಿಗೆ ರಕ್ಷೆ ಕಟ್ಟಿ ಶತ್ರುಗಳಿಂದ ರಕ್ಷಣೆಯನ್ನು ಪಡೆಯುವುದು ಇದರ ಉದ್ದೇಶ. ಅಣ್ಣ ತಂಗಿ ಅಂದರೆ ರಕ್ತ ಸಂಬಂಧವೇ ಬೇಕೆಂದಿಲ್ಲ. ಜಾತಿ, ಮತಗಳ ಭೇದ ಬರುವುದಿಲ್ಲ. ಈ ಪದ್ಧತಿ ಪ್ರಾಯಶಃ ರಜಪೂತರ ಕಾಲದಲ್ಲಿ ಪ್ರಾಮುಖ್ಯತೆ ಪಡೆಯಿತು. ಒಂದು ಕಡೆ ಮೊಘಲರ ದಾಳಿ ಮತ್ತೊಂದೆಡೆ ಅಲ್ಲಾವುದ್ದೀನ್ ಖಿಲ್ಜಿ ಅಂತಹ ಆಕ್ರಮಣಕಾರರ ದಾಳಿಯಿಂದ ಹೆಣ್ಮಕ್ಕಳು ಸಂತ್ರಸ್ತರಾದ ಸಂದರ್ಭದಲ್ಲಿ ತಮ್ಮ ಮಾನವನ್ನು ಉಳಿಸಿಕೊಳ್ಳಲು ರಕ್ಷಾಬಂಧನದ ಮೊರೆ ಹೊಕ್ಕರು. ಅಂಥ ಒಂದು ಸಂದರ್ಭದಲ್ಲಿ ರಜಪೂತ ರಾಣಿ ಕರ್ಮಾವತಿ ಮೊಗಲ್ ದೊರೆಯಾದ ಹುಮಾಯೂನ್ ನಿಗೆ ರಕ್ಷೆ ಕಳುಹಿಸಿ ಕೊಟ್ಟದ್ದು, ಆತ ಅವಳ ರಕ್ಷಣೆಗೆ ಧಾವಿಸಿದ್ದು ಕೂಡ ಉಲ್ಲೇಖನೀಯ.
ಕೇಸರಿ ಬಣ್ಣ ತ್ಯಾಗದ ಸಂಕೇತ. ಹಲವು ನೂಲುಗಳನ್ನು ಒಂದು ದಾರದ ಮೂಲಕ ಪೋಣಿಸಿ ಕಟ್ಟುವುದು ಐಕ್ಯತೆಯ ಸಂಕೇತ. ಕೇಸರಿ ಈ ನಾಡಿನ ಮಣ್ಣಿನ ಬಣ್ಣವೂ ಹೌದು. ಉದಯ ಹಾಗೂ ಅಸ್ಥದ ಸೂರ್ಯನ ಬಣ್ಣವೂ ಅದೇ ಆಗಿದೆ. ರಕ್ಷೆ ಕಟ್ಟುವ ಹೆಣ್ಣು, ಕಟ್ಟಿಸಿಕೊಂಡ ಗಂಡು ಇಬ್ಬರೂ ಆ ಸಂಕಲ್ಪವನ್ನು ವರ್ಷವಿಡೀ ನಿಭಾಯಿಸಬೇಕು ಅನ್ನುವುದೇ ಇಂದಿನ ಆಶಯ. ಈ ರಕ್ಷಾ ಬಂಧನದ ಹಬ್ಬ ಕೇವಲ ತೋರಿಕೆಯ ಹಬ್ಬವಾಗದೆ ಪ್ರತಿಯೊಬ್ಬರ ಸಂಕಲ್ಪದ ಹಬ್ಬವಾಗಲಿ ಎನ್ನುವುದು ನ್ಯೂಸ್ ಕಾರ್ಕಳ ತಂಡದ ಆಶಯ.error: Content is protected !!
Scroll to Top